ಬಾರ್ಡ್‌ ತಪ್ಪು ಮಾಹಿತಿ ನೀಡಿದ್ದಕ್ಕೆ ಗೂಗಲ್‌ಗೆ 8 ಲಕ್ಷ ಕೋಟಿ ನಷ್ಟ!

(ನ್ಯೂಸ್ ಕಡಬ) newskadaba.com  ನ್ಯೂಯಾರ್ಕ್, ಫೆ.10.  ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಪ್ರಭಾವ ಸೃಷ್ಟಿಸುತ್ತಿರುವ ಚಾಟ್‌ ಜಿಪಿಟಿಗೆ ಪರ್ಯಾಯವಾಗಿ ಗೂಗಲ್‌ ಬಿಡುಗಡೆ ಮಾಡಿರುವ ‘ಬಾರ್ಡ್’ ತಪ್ಪು ಮಾಹಿತಿಯೊಂದನ್ನು ನೀಡಿದೆ. ಇದರ ಬೆನ್ನಲ್ಲೇ ಗೂಗಲ್‌ನ ಮಾತೃಸಂಸ್ಥೆಯಾದ ಆಲ್ಫಾಬೆಟ್‌ನ ಷೇರು ಮೌಲ್ಯ ಒಟ್ಟಾರೆ 8.2 ಲಕ್ಷ ಕೋಟಿ ರೂ.ನಷ್ಟು ಕುಸಿತ ಕಂಡಿದೆ. ಸೋಮವಾರ ಬಿಡುಗಡೆಯಾದ ‘ಬಾರ್ಡ್‌’ನ ಪ್ರಾತ್ಯಕ್ಷಿಕೆಯನ್ನು ಬುಧವಾರ ಗೂಗಲ್‌ ಆಯೋಜಿಸಿತ್ತು. ಈ ವೇಳೆ ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ ಬಗ್ಗೆ ವಿವರಿಸುತ್ತಿದ್ದ ಬಾರ್ಡ್‌, ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ ಮೊಟ್ಟಮೊದಲ ಬಾರಿಗೆ ನಮ್ಮ ಸೌರವ್ಯೂಹದ ಹೊರಗಿರುವ ಗ್ರಹವೊಂದರ ಫೋಟೋವನ್ನು ತೆಗೆದಿದೆ ಎಂದು ಉತ್ತರಿಸಿದೆ.

Also Read  ಕಾಲು ಜಾರಿ ಹಳ್ಳಕ್ಕೆ ಬಿದ್ದು ಮೃತಪಟ್ಟ ಬಾಲಕ

ಆದರೆ ಬಾಹ್ಯಗ್ರಹದ ಫೋಟೋವನ್ನು 2004ರಲ್ಲಿ ಮೊದಲ ಬಾರಿಗೆ ಯುರೋಪಿಯನ್‌ ಸದರ್ನ್‌ ಅಬ್ಸರ್ವೇಟರಿ ಲಾರ್ಜ್ ಟೆಲಿಸ್ಕೋಪ್‌ ತೆಗೆದಿದೆ. ಇದನ್ನು ನಾಸಾ ಸಹ ಒಪ್ಪಿಕೊಂಡಿದೆ. ಗೂಗಲ್‌ನಿಂದ ಈ ರೀತಿಯ ತಪ್ಪು ಮಾಹಿತಿ ನೀಡಿದ ಬೆನ್ನಲ್ಲೇ ಆಲ್ಫಾಬೆಟ್‌ನ ಷೇರು ಮೌಲ್ಯ ಶೇ.9ರಷ್ಟು ಕುಸಿತ ಕಂಡಿದ್ದು, ಕಂಪನಿ ಒಟ್ಟಾರೆ 8.2 ಲಕ್ಷ ಕೋಟಿ ರು. ನಷ್ಟಅನುಭವಿಸಿದೆ ಎಂದು ವರದಿಯಾಗಿದೆ.

 

 

 

error: Content is protected !!
Scroll to Top