ಟರ್ಕಿ-ಸಿರಿಯಾದಲ್ಲಿ ಭೀಕರ ಭೂಕಂಪ ದುರಂತ ➤ ಮೃತಪಟ್ಟವರ ಸಂಖ್ಯೆ 21 ಸಾವಿರಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ಕಹ್ರಾಮನ್ಮರಸ್, ಫೆ.10. ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಬದುಕುಳಿದವರನ್ನು ಹುಡುಕಲು ರಕ್ಷಣಾ ಕಾರ್ಯಕರ್ತರು ಕೊನೆಯ ಹಂತದ ಕಾರ್ಯಾಚರಣೆ ನಡೆಸುತ್ತಿದ್ದಾರೆ, ಅವಶೇಷಗಳಡಿ ಸಿಲುಕಿರುವ ಅನೇಕರ ಗುರುತು ಕೂಡ ಸಿಗದಂತಹ ಸ್ಥಿತಿ ಉಂಟಾಗಿದೆ. ಟರ್ಕಿಯ ಅಧ್ಯಕ್ಷರು ಇದನ್ನು “ಶತಮಾನದ ದುರಂತ” ಎಂದು ಕರೆದಿದ್ದು ಎರಡೂ ದೇಶಗಳಲ್ಲಿ ಸಂಭವಿಸಿದ ಭೂಕಂಪದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 21 ಸಾವಿರಕ್ಕೆ ಏರಿಕೆಯಾಗಿದೆ.

ಅವಶೇಷಗಳು, ಕಟ್ಟಡಗಳ ಅವಶೇಷಗಳು, ಲೋಹ, ಪುಡಿಮಾಡಿದ ಕಾಂಕ್ರೀಟ್ ಮತ್ತು ತಂತಿಗಳು ಎಲ್ಲೆಡೆ ಕಂಡುಬರುತ್ತಿವೆ. ಅಡಿಯಾಮಾನ್‌ನಲ್ಲಿ, ಕಟ್ಟಡದ  ಅವಶೇಷಗಳಡಿಯಲ್ಲಿ ಸಿಲುಕಿದವರು ತಮ್ಮನ್ನು ಕಾಪಾಡುವಂತೆ ಬೇಡಿಕೊಳ್ಳುತ್ತಿರುವುದು ಮನಕಲಕುವಂತೆ ಮಾಡಿದೆ.

Also Read  ಮೂವರು ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಸೇನೆ ➤ ಭಾರತದ ಓರ್ವ ಯೋಧ ಹುತಾತ್ಮ

 

 

 

 

error: Content is protected !!
Scroll to Top