ಮನೆ ಬಾಗಿಲಿಗೇ ಡ್ರಗ್ಸ್ ಡೆಲಿವರಿ ➤‌ 3 ಝೋಮ್ಯಾಟೋ ಬಾಯ್ಸ್ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.10. ಮನೆ ಬಾಗಿಲಿಗೆ ಡ್ರಗ್ಸ್ ಪೂರೈಸುತ್ತಿದ್ದ ಮೂವರು ‘ಝೋಮ್ಯಾಟೋ’ ಫುಡ್‌ ಡೆಲಿವರಿ ಬಾಯ್ಸ್ ಹಾಗೂ ಇಬ್ಬರು ವಿದೇಶಿ ಪ್ರಜೆಗಳು ಸೇರಿದಂತೆ 11 ಮಂದಿ ಪ್ರತ್ಯೇಕವಾಗಿ ಸಿಸಿಬಿಗೆ ಸಿಕ್ಕಿ ಬಿದ್ದಿದ್ದಾರೆ.

ತಾಂಜೇನಿಯಾದ ಟಿಬೇರಿಯಸ್‌ ನ್ಯಾಕುಂಡಿ, ಕೀನ್ಯಾದ ಕೆರ್ರಿ ಸಾರಾ, ಮೊಹಮ್ಮದ್‌ ರಿಜ್ವಾನ್‌, ಕೇರಳದ ರಾಗೇಶ್‌, ಸಚಿನ್‌, ಶಾಹುಲ್‌, ಹಲಸೂರಿನ ಪ್ರಶಾಂತ್‌ ಹಾಗೂ ಪಶ್ಚಿಮ ಬಂಗಾಳದ ಸಿದ್ಧಾಂತ್‌ ಸೇರಿದಂತೆ 11 ಮಂದಿ ಆರೋಪಿಗಳು ಬಂಧಿತರಾಗಿದ್ದಾರೆ  ಎಂದು ವರದಿಯಾಗಿದೆ.

ಆರೋಪಿಗಳಿಂದ 926.45 ಗ್ರಾಂ ಎಡಿಎಂಎ ಕ್ರಿಸ್ಟೆಲ್‌, 50.95 ಗ್ರಾಂ ತೂಕದ 117 ಎಡಿಎಂಎ ಎಕ್ಸೈಟೆಸಿ ಮಾತ್ರೆಗಳು, 3.83 ಗ್ರಾಂ 219 ಎಲ್‌ಎಸ್‌ಡಿ ಸ್ಟ್ರಿಫ್ಸ್‌ಗಳು ಮತ್ತು 83.37 ಗ್ರಾಂ ಹ್ಯಾಶಿಸ್‌ ತೈಲ ಸೇರಿದಂತೆ .1.34 ಕೋಟಿ ಮೌಲ್ಯದ ಡ್ರಗ್ಸ್ ಹಾಗೂ 10 ಮೊಬೈಲ್‌ಗಳು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ತಿಳಿಸಿದ್ದಾರೆ.

Also Read  ಮುನ್ನೂರು ಗ್ರಾಮಸಭೆ ಹಾಗೂ ವಾರ್ಡು ಸಭೆ

 

 

 

 

error: Content is protected !!
Scroll to Top