ಟ್ಯಾಂಕ್ ಗೆ ಬಿದ್ದು ಬಾಲಕಿ ಮೃತ್ಯು

(ನ್ಯೂಸ್ ಕಡಬ)newskadaba.com ಔರದ್,ಫೆ.09. ಪಟ್ಟಣದ ಶಿಕ್ಷಕರ ಕಾಲೊನಿಯ ಅಂಗನವಾಡಿ ಕೇಂದ್ರದ ಬಳಿಯಿರುವ ಸೆಪ್ಟಿಕ್ ಟ್ಯಾಂಕ್‍ನಲ್ಲಿ ಬಿದ್ದು ಬಾಲಕಿ ಸ್ಫೂರ್ತಿ (3) ಮೃತಪಟ್ಟಿದ್ದಾಳೆ.

ಕೂಲಿಕಾರ್ಮಿಕ ಜೀವನ್ ಮತ್ತು ಶಿಲ್ಪಾ ದಂಪತಿ ತಮ್ಮ ಮೂವರು ಪುತ್ರಿಯರಾದ ಸಲೋಮಿ (4), ಸ್ಫೂರ್ತಿ (3) ಮತ್ತು ಸೃಷ್ಟಿ(1.5)  ಈ ಮೂವರು ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಿದ್ದರು.ಮನೆಗೆ ಕರೆ ತರಲು ಶಿಲ್ಪಾ ಹೋದಾಗ, ಸ್ಫೂರ್ತಿ ಕಾಣಿಸಲಿಲ್ಲ. ಆಕೆಯ ಶವ ಸೆಪ್ಟಿಕ್ ಟ್ಯಾಂಕ್‍ನಲ್ಲಿ ಸಿಕ್ಕಿತು’ ಎಂದು ಪೋಲಿಸರು ತಿಳಿಸಿದ್ದಾರೆ.

‘ಅಂಗನವಾಡಿ ಕಟ್ಟಡ ನಿರ್ಮಿಸಲು ಮಾಡಿದ್ದ ಸೆಪ್ಟಿಕ್ ಟ್ಯಾಂಕ್ ಮುಚ್ಚಿರಲಿಲ್ಲ. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯ ನಿರ್ಲಕ್ಷ್ಯ ಕಂಡುಬಂದಿದೆ. ಇನ್ನಷ್ಟು ಮಾಹಿತಿ ಪಡೆದು, ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ತಿಳಿಸಿದ್ದಾರೆ.

Also Read  ಕಸಾಪ ಚುನಾವಣೆ ಸೂಕ್ತ ಅಭ್ಯರ್ಥಿಯ ಆಯ್ಕೆಯಾಗಲಿ ➤ ಖಿದ್ಮಾ ಸಂಚಾಲಕ ಆಮಿರ್ ಬನ್ನೂರು ಅಭಿಪ್ರಾಯ

 

 

 

* ಟ್ಯಾಂಕ್‍ಗೆ ಬಿದ್ದು ಬಾಲಕಿ ಮೃತ್ಯು*

error: Content is protected !!
Scroll to Top