ಪೊಲೀಸ್ ಫೈರಿಂಗ್ ನಲ್ಲಿ ಯುಎಲ್ಎಫ್-ಐ ನಾಯಕ ಮೃತ್ಯು

(ನ್ಯೂಸ್ ಕಡಬ)newskadaba.com ಅಸ್ಸಾಂ, ಫೆ.09. ನಿಷೇಧಿತ ಸಂಘಟನೆಯಾಗಿರುವ ಯುನೈಟೆಡ್ ಲಿಬರೇಷನ್ ಫ್ರಂಟ್ ಆಫ್ ಅಸೋಮ್-ಇಂಡಿಪೆಂಡೆಂಟ್ (ಯುಎಲ್ಎಫ್ಎ-ಐ) ನ ನಾಯಕನೊಬ್ಬ ಅಸ್ಸಾಂ ಪೊಲೀಸರ ಗುಂಡೇಟಿಗೆ ಮೃತಪಟ್ಟಿದ್ದಾನೆ..

ತಿನ್ಸುಕಿಯಾ ಜಿಲ್ಲೆಯಲ್ಲಿ  ಈ ಘಟನೆ ನಡೆದಿದ್ದು,  ಇದೇ ಪ್ರದೇಶದಲ್ಲಿ ಯುಎಲ್ಎಫ್ಎ-ಐ ನ ನಾಯಕ ಉದಯ್ ಆಕ್ಸೋಮ್ ಹಾಗೂ ಆತನ ಸಹಚರರು ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ತಿನ್ಸುಕಿಯಾದಲ್ಲಿನ ಭದ್ರತಾ ತಂಡ, ನಿಷೇಧಿತ ಉಗ್ರ ಸಂಘಟನೆಗಳ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿವೆ. ಟಿಕಕ್ ಮುಲುಂಗ್ ಪರ್ಬತ್ ಪ್ರದೇಶದಲ್ಲಿನ ಅಡಗುದಾಣಗಳಿಗೆ ತಲುಪುತ್ತಿದ್ದಂತೆಯೇ ಯುಎಲ್ಎಫ್ಎ ಐ ಕೇಡರ್ ಗಳು ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಪ್ರತಿ ದಾಳಿ ನಡೆಸಿದ್ದು, ಉದಯ್ ಆಕ್ಸೋಮ್ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Also Read  ಬಂಟ್ವಾಳ: ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ತಲೆಗೆ ಕಲ್ಲು ಬಿದ್ದು ಕಾರ್ಮಿಕ ಮೃತ್ಯು

error: Content is protected !!
Scroll to Top