ಸರಗಳ್ಳರ ಬಂಧನ ➤ 20 ಲಕ್ಷ ರೂ ಮೌಲ್ಯದ ಚಿನ್ನಾಭರಣ ವಶ

(ನ್ಯೂಸ್ ಕಡಬ)newskadaba.com ರಾಮನಗರ, ಫೆ.09.  ಜಿಲ್ಲೆಯ ಜನರ ಹಾಗೂ ಪೊಲೀಸರ ನಿದ್ದೆಗೆಡಿಸಿದ್ದ ಖತರ್ನಾಕ್​ಗಳು ಕೊನೆಗೂ ಪೊಲೀಸರ  ಬಲೆಗೆ ಬಿದ್ದಿದ್ದಾರೆ. ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ಅಂತರ್ ಜಿಲ್ಲಾ ಮನೆ ಹಾಗೂ ಸರಗಳ್ಳರನ್ನ ಬಂಧಿಸಿ, ಬಂಧಿತರಿಂದ ಸುಮಾರು 20 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನ ವಶಕ್ಕೆ ಪಡೆದಿದ್ದಾರೆ. ರಾಮನಗರ ತಾಲೂಕಿನ ಸೀಬಕಟ್ಟೆ ಗ್ರಾಮದ ಮಂಜುನಾಥ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯ ಬೀಗ ಹೊಡೆದು ಮನೆಯಲ್ಲಿ ಇದ್ದ 190 ಗ್ರಾಂ ಚಿನ್ನಾಭರಣಗಳನ್ನ ದೋಚಿದ್ರು. ಅಲ್ಲದೆ ರಾಮನಗರ ತಾಲೂಕಿನ ಗ್ರಾವೊಂದರಲ್ಲಿ ಬಳಿ ಹೋಗುತ್ತಿದ್ದ ಐವರು ಮಹಿಳೆಯರಲ್ಲಿ ಪ್ರೇಮ ಹಾಗೂ ಚನ್ನಮ್ಮ ಎಂಬುವವರ ಮಾಂಗಲ್ಯ ಸರವನ್ನು ಕಿತ್ತುಕೊಂಡು ಬೈಕ್​ನಲ್ಲಿ ಪರಾರಿಯಾಗಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಕೊನೆಗೂ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಬೆಂಗಳೂರಿನ ಅಂದರಹಳ್ಳಿ ನಿವಾಸಿ ಸುದೀಪ್, ಮೈಸೂರು ಜಿಲ್ಲೆ ಟೀ ನರಸಿಪುರ ತಾಲೂಕಿನ ಚಾಮೇನಹಳ್ಳಿ ಗ್ರಾಮದ ಮಂಜುನಾಥ್ ಹಾಗೂ ಆತನ ತಂದೆ ನಂಜುಂಡ, ತಾಯಿ ರಾಜೇಶ್ವರಿ ಎಂಬುವವರನ್ನ ಬಂಧಿಸಿ, ಒಟ್ಟು 11 ಪ್ರಕರಣಗಳನ್ನ ಭೇದಿಸಿ ಸುಮಾರು 20 ಲಕ್ಷ ರೂ ಮೌಲ್ಯದ 358 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ, ಸೋನಿ ಕ್ಯಾಮರಾ ಹಾಗೂ ಒಂದು ಬೈಕ್ ನ್ನು ವಶಕ್ಕೆ ಪಡೆದಿದ್ದಾರೆ. ಇನ್ನು  ಈ ಪ್ರಕರಣ ಸಂಬಂಧ ಗಣೇಶ್ ಎಂಬ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ ಎಂದು ವರದಿಯಾಗಿದೆ.

Also Read  ಕಾರವಾರ : ಇಂದು ಮತ್ತು ನಾಳೆ(ಅ.8) ಸಾಗರ ಕವಚ ಅಣುಕು ಕಾರ್ಯಾಚರಣೆ

 

error: Content is protected !!
Scroll to Top