➤ಕಬಡ್ಡಿ ಆಡುತ್ತಿದ್ದಾಗ ಹೃದಯಾಘಾತ ಪಿಯುಸಿ ವಿದ್ಯಾರ್ಥಿನಿ ಮೃತ್ಯು..!

(ನ್ಯೂಸ್ ಕಡಬ) newskadaba.com. ಬೆಂಗಳೂರು.ಫೆ.9.  ಕಬಡ್ಡಿ ಆಡುತ್ತಿದ್ದ ವೇಳೆಯೇ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತಗೊಂಡು ಮೃತಪಟ್ಟಿರುವ ಘಟನೆ ಬೆಂಗಳೂರು ನಗರದ ಆನೇಕಲ್ ತಾಲೂಕಿನ ಅತ್ತಿಬೆಲೆಯ ಖಾಸಗಿ ಕಾಲೇಜಿನಲ್ಲಿ ನಡೆದಿದೆ.

ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ದುರಂತ ಸಾವಿಗೆ ಒಳಗಾಗಿದ್ದು, ಮೃತ ವಿದ್ಯಾರ್ಥಿನಿಯನ್ನು ಸಂಗೀತಾ (17) ಎಂದು ಗುರುತಿಸಲಾಗಿದೆ. ಕಾಲೇಜಿನಲ್ಲಿ ಕ್ರೀಡಾ ಉತ್ಸವದ ಹಿನ್ನೆಲೆ ಮಹಿಳೆಯರ ತಂಡದ ಕಬಡ್ಡಿ ಕೂಡ ಇತ್ತು, ಹೀಗಾಗಿ ಸಂಗೀತಾ ತನ್ನ ತಂಡದ ಪರವಾಗಿ ರೈಡಿಂಗ್ ಹೋಗಿದ್ದಳು. ಆಗ ಎದುರಾಳಿ ತಂಡದವರು ಆಕೆಯನ್ನು ಹಿಡಿಯಲು ಮುಂದಾಗಿದ್ದರು. ಆಗ ಒಮ್ಮೆಗೆ ಹೃದಯಾಘಾತಗೊಂಡು ಸಂಗೀತಾ ಕುಸಿದುಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಶಾಲಾ ಆಡಳಿತ ಮಂಡಳಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಆಕೆ ತಕ್ಷಣದಲ್ಲಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

Also Read  ನವೆಂಬರ್ 29ರಂದು ಮಹಾನಗರ ಪಾಲಿಕೆ ಪರಿಷತ್ತಿನ ಸಾಮಾನ್ಯ ಸಭೆ

 

error: Content is protected !!
Scroll to Top