ಮಗಳ ವ್ಯಾನಿಟಿ ಬ್ಯಾಗ್​ನಲ್ಲಿ ಪ್ರೆಗ್ನೆನ್ಸಿ ಕಿಟ್ ಪತ್ತೆ ಪ್ರಕರಣ ➤ ಅಮಾನುಷವಾಗಿ ಮಗಳನ್ನು ಕೊಂದ ಪೋಷಕರು *

(ನ್ಯೂಸ್ ಕಡಬ)newskadaba.com ಅಲಮಾಬಾದ್, ಫೆ.09. 21ರ ಹರೆಯದ ಯುವತಿಯೊಬ್ಬಳ  ಬಳಿ ಗರ್ಭಧಾರಣೆ ಪರೀಕ್ಷೆಯ ಕಿಟ್‌ಗಳು ಸಿಕ್ಕಿದ್ದರಿಂದ ಆಕೆಯ ಹೆತ್ತವರು  ಆಕೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ, ಕತ್ತು ಹಿಸುಕಿ ಮಗಳನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿ ತಮ್ಮ ಇಬ್ಬರು ಬಂಧುಗಳ ಸಹಾಯದಿಂದ ದೇಹವನ್ನು ಗುರುತಿಸಲು ಸಾಧ್ಯವಾಗದಂತೆ ಆಸಿಡ್  ಸುರಿದು, ನಂತರ ಮಗಳ ದೇಹವನ್ನ ಎಸೆದಿದ್ದಾರೆ ಎಂದು ಆರೋಪಿಸಿ ನಾಲ್ವರನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸುತ್ತದೆ.

ಇಲ್ಲಿನ ತೇನ್ ಷಾ ಅಲಮಾಬಾದ್ ಗ್ರಾಮದ ನಿವಾಸಿ ನರೇಶ್ ಅವರು ಫೆಬ್ರವರಿ 3 ರಂದು ತಮ್ಮ ಮಗಳು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಇದೀಗ ಗ್ರಾಮದ ಹೊರಗಿನ ಕಾಲುವೆಯಿಂದ ಆಕೆಯ ದೇಹವನ್ನು ವಿರೂಪಗೊಳಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

Also Read  ಮತ್ತೆ ಸುದ್ದಿಯಾಗುತ್ತಿದೆ ನೇತ್ರಾವತಿ ಸೇತುವೆ ಸುಸೈಡ್ ಪಾಯಿಂಟ್‍ನ ಕಹಾನಿ ➤ ವ್ಯಕ್ತಿಯೊಬ್ಬರು ನದಿಗೆ ಹಾರಿರುವ ಶಂಕೆ

 

error: Content is protected !!
Scroll to Top