ದೇಶದಲ್ಲಿ10 ಪರಮಾಣು ಶಕ್ತಿ ರಿಯಾಕ್ಟರ್‌ಗಳ ಸ್ಥಾಪನೆ ➤ಸರ್ಕಾರದಿಂದ ಅನುಮತಿ!

(ನ್ಯೂಸ್ ಕಡಬ) newskadaba.com. ನವದೆಹಲಿ. ಫೆ.9.  ದೇಶದಲ್ಲಿ ಒಟ್ಟು 7000 ಮೆಗಾವ್ಯಾಟ್ ಸಾಮರ್ಥ್ಯದ 10 ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು ಸ್ಥಾಪಿಸಲು ಸರ್ಕಾರ ಅನುಮತಿ ನೀಡಿದೆ. ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಇಲಾಖೆಯ ರಾಜ್ಯ ಖಾತೆ ಸಚಿವ ಡಾ.ಜಿತೇಂದ್ರ ಸಿಂಗ್ ಲೋಕಸಭೆಯಲ್ಲಿ ಕೊಟ್ಟ ಲಿಖಿತ ಉತ್ತರದಲ್ಲಿ ಒಟ್ಟು 8700 ಮೆಗಾವ್ಯಾಟ್ ಸಾಮರ್ಥ್ಯದ 11 ರಿಯಾಕ್ಟರ್‌ಗಳು ನಿರ್ಮಾಣ ಅಥವಾ ಕಾರ್ಯಾರಂಭದ ವಿವಿಧ ಹಂತಗಳಲ್ಲಿವೆ ಎಂದು ತಿಳಿಸಿದ್ದಾರೆ.

ಕೇಂದ್ರದ ಪ್ರಸ್ತುತ ನೀತಿಯು ಪರಮಾಣು ಶಕ್ತಿಯನ್ನು ನಿಷೇದಿಸುತ್ತದೆ, ಆದರೆ ಪರಮಾಣು ಶಕ್ತಿ ಉತ್ಪಾದನೆಯನ್ನು ಹೆಚ್ಚಿಸಲು ಸಾರ್ವಜನಿಕ ವಲಯದ ಉದ್ಯಮಗಳೊಂದಿಗೆ ಜಂಟಿ ಉದ್ಯಮಗಳನ್ನು ಸಕ್ರಿಯಗೊಳಿಸಲು 1962 ರ ಪರಮಾಣು ಶಕ್ತಿ ಕಾಯಿದೆಯನ್ನು ತಿದ್ದುಪಡಿ ಮಾಡಲಾಗಿದೆ ಎಂದು ಜಿತೇಂದ್ರ ಸಿಂಗ್ ಹೇಳಿದರು.

Also Read  ಮಾನಸಿಕ ಅಸ್ವಸ್ಥನಿಂದ ತಾಯಿ ಹಾಗೂ ಸಹೋದರನಿಗೆ ಹಲ್ಲೆ..! ➤ ಇಬ್ಬರು ಗಂಭೀರ

ಇಂಡಿಯಾ ಎನರ್ಜಿ ಫೋರಂನ ಪರಮಾಣು ಸಮಾವೇಶದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವ ಜಿತೇಂದ್ರ ಸಿಂಗ್ , ಅಣುಶಕ್ತಿ ಬಳಕೆಯ ಕುರಿತಂತೆ ಸಾರ್ವಜನಿಕರಲ್ಲಿ ಇರುವ ತಪ್ಪು ಕಲ್ಪನೆಯನ್ನು ನಿವಾರಿಸಲು ಅರಿವು ಮೂಡಿಸಬೇಕಿದೆ ಎಂದಿದ್ದರು. ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೇಡಿಕೆಯನ್ನು ಪೂರೈಸಲು ಅಣು ಶಕ್ತಿ ಒಂದು ಪರ್ಯಾಯ ಮೂಲವಾಗಿದೆ ಮತ್ತು ದೈನಂದಿನ ಬದುಕನ್ನು ಸುಲಲಿತಗೊಳಿಸುವ ಒಂದು ಸಾಧನವಾಗಿದೆ ಎಂದು ಸಮಾವೇಶದಲ್ಲಿ ಮಾತನಾಡಿದ್ದರು.

error: Content is protected !!
Scroll to Top