(ನ್ಯೂಸ್ ಕಡಬ)newskadaba.com ಬೆಂಗಳೂರು,ಫೆ.09. ಶಾಲೆಯೊಂದು ಯುಕೆಜಿ ವಿದ್ಯಾರ್ಥಿನಿಯನ್ನು ಎರಡು ರೈಮ್ಸ್ ಹೇಳಲು ವಿಫಲವಾದಳೆಂದು ಸೆಮಿಸ್ಟರ್ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸಿದ್ದು,ಇದರಿಂದ ಆಕ್ರೋಶಗೊಂಡ ಹೆತ್ತವರು ಶಾಲಾ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ವಿದ್ಯಾರ್ಥಿನಿಯ ತಂದೆ ಮನೋಜ್ ಬಾದಲ್, “ಶಾಲೆಯ ಆ್ಯಪ್ ನಲ್ಲಿ ನಮ್ಮ ಪುತ್ರಿಯ ಅಂಕಪಟ್ಟಿ ನೋಡಿ ಆಘಾತಗೊಂಡೆವು.ಆಕೆ 160 ಅಂಕಗಳ ಪೈಕಿ 100 ಅಂಕ ಗಳಿಸುವಲ್ಲಿ ಯಶಸ್ವಿಯಾಗಿದ್ದಳು.ಆದರೆ, 40 ಅಂಕದ ಪೈಕಿ ಕನಿಷ್ಟ 14 ಅಂಕ ಗಳಿಸಬೇಕಿದ್ದ ರೈಮ್ಸ್ ನಲ್ಲಿ ಕೇವಲ 4 ಅಂಕ ಗಳಿಸಿದ್ದಳು” ಎಂದು ಹೇಳಿದ್ದಾರೆ.