ಒಂದೇ ಕುಟುಂಬದ 5 ಮಂದಿ ಅನುಮಾನಾಸ್ಪದವಾಗಿ ಮೃತ್ಯು!

(ನ್ಯೂಸ್ ಕಡಬ)newskadaba.com ಕುಪ್ವಾರ, ಫೆ.09. ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕ್ರಾಲ್​ಪೋರಾದಲ್ಲಿ ಒಂದೇ ಕುಟುಂಬದ 5 ಮಂದಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರು ಮೂಲತಃ ಉತ್ತರಪ್ರದೇಶದವರಾಗಿದ್ದಾರೆ, ರಾತ್ರಿ ತಮ್ಮ ಕೊಠಡಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ, ಉತ್ತರ ಪ್ರದೇಶದ ಬಿಜ್ನೋರ್ ನಿವಾಸಿ ಮಜಿದ್ ಅನ್ಸಾರಿ ಎಂಬಾತ ತನ್ನ ಕುಟುಂಬದೊಂದಿಗೆ ಕ್ರಾಲ್ಪೋರಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.

ಐವರು ಕುಟುಂಬ ಸದಸ್ಯರು ಬೆಳಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಕ್ಕಪಕ್ಕದ ಜನರು ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಉಸಿರುಗಟ್ಟುವಿಕೆ ಪ್ರಕರಣವೆಂದು ತೋರುತ್ತದೆ, ಮೂಲಗಳ ಪ್ರಕಾರ ಮೃತರನ್ನು ಮಜೀದ್ ಅನ್ಸಾರಿ (35), ಅವರ ಪತ್ನಿ ಸೋಹಾನಾ ಖಾತೂನ್ (30), ಮಗ ಫೈಜಾನ್ ಅನ್ಸಾರಿ (4), ಅಬು ಜರ್ (3) ಮತ್ತು ನವಜಾತ ಶಿಶು ಕೂಡ ಮೃತಪಟ್ಟಿದೆ.

Also Read  ಬರ್ತ್ ಡೇ ಪಾರ್ಟಿಯಲ್ಲಿ ಸಹೋದ್ಯೋಗಿಯ ಕೊಲೆ..!  4ಮಂದಿ ಅರೆಸ್ಟ್..!          

 

error: Content is protected !!
Scroll to Top