ಗಗನಕ್ಕೇರಿದ ವೀಳ್ಯದೆಲೆ ಬೆಲೆ!

(ನ್ಯೂಸ್ ಕಡಬ)newskadaba.com ತುಮಕೂರು, ಫೆ.09. ತಾಲೂಕಿನ ತೋವಿನಕೆರೆಯ ಸಂತೆಯಲ್ಲಿ ವೀಳ್ಯದೆಲೆ ಒಂದು ಕಟ್ಟಿಗೆ ರು.160 ದಾಖಲೆ ಬೆಲೆಗೆ ಮಾರಾಟವಾಗಿದ್ದು, ಇದುವರೆಗೂ ಈ ಬೆಲೆ ತಲುಪಿರಲಿಲ್ಲ. ಮಧುಗಿರಿ ತಾಲೂಕು ಲಿಂಗಸಂದ್ರದ ಬೆಳೆಗಾರ ನಾಗರಾಜು ಸಂತೆಗೆ ತಂದಿದ್ದ ವೀಳ್ಯೆದೆಲೆ ಇದುವರೆಗೂ ಮಾರಾಟವಾಗದ ಬೆಲೆಗೆ ಮಾರಾಟವಾಯಿತು.

ಈ ಸಂತೆಯಲ್ಲಿ ವೀಳ್ಯದೆಲೆ ಮಾರಾಟ ಹಲವು ದಶಕಗಳಿಂದ ನಡೆಯುತ್ತಿದ್ದು, ಮಧುಗಿರಿ ತಾಲೂಕು ದೊಡ್ಡೇರಿ ಹೋಬಳಿ ತೋವಿನಕೆರೆ ಸುತ್ತಮುತ್ತಲಿನ ಪ್ರದೇಶಗಳ ವೀಳ್ಯದೆಲೆ ಬೆಳೆಯುವ ರೈತರು ಇಲ್ಲಿನ ಸಂತೆಗೆ ತಂದು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಾರೆ. ಶಿರಾ, ಮಧುಗಿರಿ, ಕೊಡಗೇನಹಳ್ಳಿ, ಗುಬ್ಬಿ, ಹಿಂದೂಪುರ, ತುಮಕೂರು ಮತ್ತು ಚೋಳೂರಿನಿಂದ ಖರೀದಿದಾರರು ಬರುತ್ತಾರೆ ಎಂದು ವರದಿಯಾಗಿದೆ.

Also Read  ದಂತ ಚಿಕಿತ್ಸೆಯಲ್ಲಿ ಲೇಸರ್ ► ಡಾ| ಮುರಲೀ ಮೋಹನ್ ಚೂಂತಾರು ರವರ ಲೇಖನ

 

error: Content is protected !!
Scroll to Top