➤ಆಸೀಸ್ ವಿರುದ್ಧ ವಿಶ್ವ ದಾಖಲೆ ಬರೆಯುವ ಸನಿಹದಲ್ಲಿ ಕಿಂಗ್ ಕೊಹ್ಲಿ..!

ನ್ಯೂಸ್ ಕಡಬ) newskadaba.com. ನವದೆಹಲಿ. ಫೆ.9. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮಹತ್ವದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಟೆಸ್ಟ್ ಪಂದ್ಯ ಇಂದಿನಿಂದ ನಾಗ್ಪುರದಲ್ಲಿ ಆರಂಭವಾಗಿದೆ. ಇಂದಿನ ಪಂದ್ಯ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್​ಮನ್ ವಿರಾಟ್ ಕೊಹ್ಲಿಗೆ ಬಹಳ ವಿಶೇಷವಾಗಿದ್ದು, ಈ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಮಹತ್ವದ ದಾಖಲೆಯೊಂದನ್ನು ಬರೆಯಲಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ 15 ವರ್ಷಗಳ ವೃತ್ತಿಜೀವನದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದು, ಈ ಪಂದ್ಯದಲ್ಲಿ ವಿರಾಟ್ ಕೇವಲ 64 ರನ್ ಗಳಿಸಿದರೆ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ 25 ಸಾವಿರ ರನ್ ಪೂರೈಸಲಿದ್ದಾರೆ.

Also Read  ಆರ್ಥಿಕ ಸಮಸ್ಯೆಗಳು ಪರಿಹಾರವಾಗಲಿವೆ ಒಂದು ಕೆಲಸ ಮಾಡಿ ಕಷ್ಟಗಳು ಪರಿಹಾರವಾಗುತ್ತದೆ

ವಿರಾಟ್ ಕೊಹ್ಲಿ ಪ್ರಸ್ತುತ 24936 ಅಂತಾರಾಷ್ಟ್ರೀಯ ರನ್ ಗಳಿಸಿದ್ದಾರೆ. ಭಾರತದ ಮಾಜಿ ನಾಯಕ 490 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 74 ಶತಕ ಮತ್ತು 129 ಅರ್ಧ ಶತಕಗಳ ಸಹಾಯದಿಂದ ಈ ರನ್ ಗಳಿಸಿದ್ದಾರೆ. ನಾಗ್ಪುರದಲ್ಲಿ ಕೊಹ್ಲಿ 64 ರನ್ ಗಳಿಸಿದರೆ, ಸಚಿನ್ ತೆಂಡೂಲ್ಕರ್ ನಂತರ 25,000 ರನ್ ಗಳಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

error: Content is protected !!
Scroll to Top