ದಂಡ ಕಟ್ಟಲು ಬಂದಾಗ ಹಲವು ನಕಲಿ ನಂಬರ್‌ ಪ್ಲೇಟ್‌ಗಳು ಪತ್ತೆ: ಸಲೀಂ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.09. ದಂಡ ಪಾವತಿ ವೇಳೆ ಬಯಲಾಗಿರುವ ‘ನಕಲಿ ನಂಬರ್‌ ಪ್ಲೇಟ್‌’ದಾರರ ವಿರುದ್ಧ ಪ್ರತ್ಯೇಕವಾಗಿ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ವಿಶೇಷ ಪೊಲೀಸ್‌ ಆಯುಕ್ತ (ಸಂಚಾರ) ಡಾ ಎಂ.ಸಲೀಂ ಸೂಚಿಸಿದ್ದಾರೆ.

ಈ ಸಂಬಂಧವಾಗಿ ಮಾತನಾಡಿದ ಸಲೀಂ ಅವರು, ನಕಲಿ ನಂಬರ್‌ ಬಳಸಿ ಸಂಚಾರ ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲಾಗುತ್ತದೆ. ಸಂಚಾರ ಉಲ್ಲಂಘನೆ ಪ್ರಕರಣಗಳ ಸಂಬಂಧ ದಂಡ ಪಾವತಿ ವೇಳೆ ತಮ್ಮ ವಾಹನಗಳ ನೋಂದಣಿ ಸಂಖ್ಯೆಯನ್ನು ಅಕ್ರಮವಾಗಿ ಬೇರೊಬ್ಬರು ಬಳಸಿರುವ ಬಗ್ಗೆ ಸಾರ್ವಜನಿಕರು ಗಮನಕ್ಕೆ ತಂದಿದ್ದಾರೆ. ಇದುವರೆಗೆ ಈ ರೀತಿ 200-300 ಪ್ರಕರಣಗಳು ವರದಿಯಾಗಿವೆ. ಇವುಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಬೇರೊಬ್ಬರ ವಾಹನದ ನೋಂದಣಿ ಸಂಖ್ಯೆಯನ್ನು ಬಳಸಿ ಅಕ್ರಮ ಎಸಗಿರುವವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Also Read  ಬಸ್‌ ಸೀಟ್ ವಿಚಾರಕ್ಕೆ ಚಪ್ಪಲಿಯಲ್ಲಿ ಹೊಡೆದಾಡಿದ ಮಹಿಳೆಯರು..!

 

error: Content is protected !!
Scroll to Top