ಮೆಟ್ರೋ ಪಿಲ್ಲರ್​ ಬಿದ್ದು ತಾಯಿ ಮಗು ಮೃತ  ಪ್ರಕರಣ ➤ ಸರ್ಕಾರದ ಪರಿಹಾರ ತಿರಸ್ಕರಿಸಿದ ಕುಟುಂಬಸ್ಥರು

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.08. ಮೆಟ್ರೋ ಪಿಲ್ಲರ್ ಕುಸಿದು ತಾಯಿ‌ ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದುರಂತ ನಡೆದು ಒಂದು ತಿಂಗಳಾಗುತ್ತಾ ಬಂದರೂ ಇನ್ನು ಕಂಟ್ರಾಕ್ಟರ್ ಮೇಲೇ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಇನ್ನೊಂದು ಕಡೆ ಸಿಎಂ ಕಡೆಯಿಂದ ಘೋಷಣೆಯಾದ 10 ಲಕ್ಷ ಪರಿಹಾರ ಕೂಡ ಕುಟುಂಬಸ್ಥರಿಗೆ ದಕ್ಕಿಲ್ಲ. ಇನ್ನು ಬಿಎಂಆರ್​ಸಿಎಲ್ 20 ಲಕ್ಷ ಪರಿಹಾರವನ್ನು ನೀಡುತ್ತಿದ್ದು ಅದನ್ನು ತಿರಸ್ಕರಿಸಿರುವ ಕುಟುಂಬಸ್ಥರು, ಮೊದಲು ಕಂಟ್ರಾಕ್ಟರ್ ಲೈಸೆನ್ಸ್ ರದ್ದು‌ಮಾಡಿ, ಇದುವರೆಗೆ ಕಂಟ್ರಾಕ್ಟರ್ ಹಾಗೂ ಬಿಎಂಆರ್​ಸಿಎಲ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡಿಲ್ಲ.

ನಮ್ಮ ಕುಟುಂಬದ ದುರಂತಕ್ಕೆ ಹೊಣೆಯಾದವರ ವಿರುದ್ಧ ಕ್ರಮ ಕೈಗೊಳ್ಳದೇ ಇದ್ರೆ ಪರಿಹಾರ ಬೇಕಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನೊಂದು ಕಡೆಯಲ್ಲಿ ಸಿಎಂ ಪರಿಹಾರದ ಬಗ್ಗೆ ನಮಗೆ ಗೊತ್ತಾಗಿದ್ದು, ಇದುವರೆಗೆ ಸಿಎಂ ಕಚೇರಿಯಿಂದ ನಮ್ಗೆ ಯಾರು ಕರೆ ಮಾಡಿಲ್ಲ  ಎಂದು ಲೋಹಿತ್ ಮಾಹಿತಿ ನೀಡಿದ್ದಾರೆ..

error: Content is protected !!

Join the Group

Join WhatsApp Group