ರೈಸ್ ಮಿಲ್ ನಲ್ಲಿ ವಿದ್ಯುತ್ ಅವಘಡ ➤ ಯುವಕ‌ ಸಾವು!

(ನ್ಯೂಸ್ ಕಡಬ) newskadaba.com ದಾವಣಗೆರೆ, ಫೆ.8. ಆಕಾಶ್​ ರೈಸ್​ ಮಿಲ್​ನಲ್ಲಿ ವಿದ್ಯುತ್​ ಪ್ರವಹಿಸಿ ಕಾರ್ಮಿಕ ಸಂದೀಪ್​​​(32) ಎಂಬಾತ ಸಾವನ್ನಪ್ಪಿರುವ ಘಟನೆ ಹರಿಹರ ತಾಲೂಕಿನ ಮಿಡ್ಲಕಟ್ಟೆ ಗ್ರಾಮದ ರೈಸ್ ಮಿಲ್​ನಲ್ಲಿ ನಡೆದಿದೆ.

ಚನ್ನಗಿರಿ ತಾಲೂಕಿನ ಗೆದ್ದಲಹಟ್ಟಿ ಗ್ರಾಮದ ನಿವಾಸಿಯಾದ ಸಂದೀಪ್ ನೀರಿಗಾಗಿ ವಿದ್ಯುತ್​ ಪಂಪ್​ಸೆಟ್​ ಆನ್​ ಮಾಡಲು ಹೋದಾಗ ವಿದ್ಯುತ್​ ಪ್ರವಹಿಸಿ ಈ ಘಟನೆ ನಡೆದಿದೆ. ವಿದ್ಯುತ್ ಶಾಕ್​ನಿಂದ ಗಂಭೀರವಾಗಿ ಗಾಯಗೊಂಡಿದ್ದ ಸಂದೀಪ್​ನನ್ನು ಕೂಡಲೇ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಕಾರ್ಮಿಕ ಸಂದೀಪ್​​ ಸಾವನವ್ನಪ್ಪಿದ್ದಾನೆ. ಈ ಹಿಂದೆಯೂ ಮಿಲ್​ನಲ್ಲಿ ವಿದ್ಯುತ್ ಅವಘಡದಿಂದ ಯುವಕನೊಬ್ಬ ಮೃತಪಟ್ಟಿದ್ದ, ಮಾಲೀಕರ ನಿರ್ಲಕ್ಷ್ಯವೇ ಸಂದೀಪ್ ಸಾವಿಗೆ ಕಾರಣ ಎಂದು ಸಂದೀಪ್ ಕುಟುಂಬಸ್ಥರ ಆರೋಪಿಸಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Also Read  ಭಟ್ಕಳ ದೇವಸ್ಥಾನದಲ್ಲಿ ಕಳವು ಪ್ರಕರಣ ➤ ಆರೋಪಿಯ ಬಂಧನ

 

error: Content is protected !!
Scroll to Top