➤ ಮೊಬೈಲ್ ಪೋನ್ ಕಳೆದುಕೊಂಡ ಕ್ರಿಕೆಟಿಗ ವಿರಾಟ್ ಕೊಹ್ಲಿ.!

ನ್ಯೂಸ್ ಕಡಬ) newskadaba.com ನವದೆಹಲಿ, ಫೆ.8.  ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಮೊಬೈಲ್ ಪೋನನ್ನು ಕಳೆದುಕೊಂಡಿದ್ದಾರೆ.  ಈ ಬಗ್ಗೆ ಟ್ವೀಟ್ ಮಾಡಿರುವ ಕೊಹ್ಲಿ ಅನ್ ಬಾಕ್ಸ್ ಮಾಡುವ ಮುನ್ನವೇ ಮೊಬೈಲ್ ಕಳೆದುಹೋದರೆ ಅದರಷ್ಟು ದುಃಖ ಇನ್ನೊಂದಿಲ್ಲ . ಯಾರಾದರೂ ನನ್ನ ಪೋನ್ ನೋಡಿದ್ದೀರಾ ? ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಫನ್ನಿಯಾಗಿರುವ ಪ್ರತಿಕ್ರಿಯಿಸಿರುವ ಆಹಾರ ಡೆಲಿವರಿ ಸಂಸ್ಥೆ ಝೊಮ್ಯಾಟೊ, “ಅತ್ತಿಗೆಯ ಪೋನ್ ನಿಂದ ಐಸ್ ಕ್ರೀಮ್ ಆರ್ಡರ್ ಮಾಡಿ , ನಿಮಗೆ ಸಮಾಧಾನ ಸಿಗಬಹುದು” ಎಂದು ಹೇಳಿದೆ.

ಆದರೆ ವಿರಾಟ್ ಕೊಹ್ಲಿ ಅವರ ಈ ಟ್ವೀಟ್ ” ಜಾಹೀರಾತು ಪ್ರಚಾರವಾಗಿರಬಹುದು ಎಂದು ಶಂಕಿಸಲಾಗಿದೆ. ಯಾಕೆಂದರೆ ಅವರು ಇಂತಹ ಟ್ವೀಟ್‌ಗಳನ್ನು ಪೋಸ್ಟ್ ಮಾಡುವುದು ತೀರಾ ಕಡಿಮೆ.

Also Read  ಬ್ರಿಟನ್‌ ನಲ್ಲಿ ಆತಂಕ ಸೃಷ್ಟಿಸಿದ ಕೊರೊನಾ ರೂಪಾಂತರಿ..!

ಇದಕ್ಕೆ ನೆಟ್ಟಿಗರು ಬಹಳ ವಿನೋಧವಾಗಿ ಕಾಮೆಂಟ್ ಹಾಕುತ್ತಿದ್ದು , ಅವರ ಈ ಟ್ವೀಟ್ ಈಗಾಗಲೇ 61 ಸಾವಿರಕ್ಕೂ ಹೆಚ್ಚು ಲೈಕ್‌ ಪಡೆದಿದೆ.

error: Content is protected !!
Scroll to Top