ಬೆಂಕಿ ಅವಘಡ ಮನೆಯಲ್ಲಿ ಮಹಿಳೆ ಸಜೀವ ದಹನ

(ನ್ಯೂಸ್ ಕಡಬ)newskadaba.com ಬೆಂಗಳೂರು,ಫೆ.08. ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ  ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಗರದ ಮಲ್ಲೇಶ್ವರದ ಮಂತ್ರಿ ಮಾಲ್ ಹಿಂಭಾಗದ ಮನೆಯೊಂದರಲ್ಲಿ ನಡೆದಿದೆ.  ಅಡುಗೆ ಮಾಡುವಾಗ ಗ್ಯಾಸ್‌ ಸ್ಟವ್‌ನಿಂದ ಬೆಂಕಿ ಬಟ್ಟೆಗಳಿಗೆ ತಾಗಿ ಅವಘಡ ನಡೆದಿದೆ.

ಮೇರಿ (55) ಮೃತ ಮಹಿಳೆ.  ಮೇರಿ ಅವರ ಮೈದುನನ ತಿಂಗಳ ಕಾರ್ಯ ಇತ್ತು,  ಹೀಗಾಗಿ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಏಕಾಏಕಿ ಗ್ಯಾಸ್ ಸ್ಟವ್‌ನಲ್ಲಿ ಬೆಂಕಿ ಪ್ರಮಾಣ ಹೆಚ್ಚಾಗಿದೆ. ಈ ವೇಳೆ ಪಕ್ಕದಲ್ಲೇ ಇಟ್ಟಿದ್ದ ಬಟ್ಟೆಗೆ ಬೆಂಕಿ ಹೊತ್ತಿಕೊಂಡು ಮನೆಯೆಲ್ಲಾ ವ್ಯಾಪಿಸಿದೆ. ಈ ವೇಳೆ ಅಡುಗೆ ಮನೆಯಿಂದ ಹೊರಬರಲಾಗದೆ ಮೇರಿ ಅವರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ, ಮಹಿಳೆಯನ್ನು ನಗರದ  ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೇರಿ ಮೃತಪಟ್ಟಿದ್ದಾರೆ.

Also Read  ಮನೆಗೆ ಸೋಡಾ ಬಾಟಲಿ ಎಸೆತ, ಕಿಟಕಿ ಗಾಜಿಗೆ ಹಾನಿ ➤ ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

 

error: Content is protected !!
Scroll to Top