ಬೆದ್ರಾಳ: ಕೆಎಸ್ಸಾರ್ಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಢಿಕ್ಕಿ ► ತಾಯಿ-ಮಗಳು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.23. ಕೆಎಸ್ಸಾರ್ಟಿಸಿ ಬಸ್ಸೊಂದು ಹೀರೋ ಪ್ಲೆಶರ್ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ತಾಯಿ – ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ ಇಲ್ಲಿಗೆ ಸಮೀಪದ ಬೆದ್ರಾಳ ಎಂಬಲ್ಲಿ ನಡೆದಿದೆ.

ಪುತ್ತೂರಿನಿಂದ ಶಾಂತಿಗೋಡು ತೆರಳುತ್ತಿದ್ದ‌ ಕೆಎಸ್ಸಾರ್ಟಿಸಿ ಬಸ್ ಬೆದ್ರಾಳ ರೈಲ್ವ ಮೇಲ್ಸೇತುವೆ ಸಮೀಪ ದ್ವಿಚಕ್ರ ವಾಹನವನ್ನು ಓವರ್ ಟೇಕ್ ಮಾಡಿ ಮುಂದುಗಡೆ ಹೋಗುವ ಧಾವಂತದಲ್ಲಿ ಬಸ್ಸಿನ ಹಿಂಭಾಗ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದ್ದು, ವಾಹನದಿಂದ ರಸ್ತೆಗೆ ಎಸೆಯಲ್ಪಟ್ಟ ತಾಯಿ-ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ವೀರಮಂಗಲ ನಿವಾಸಿಗಳಾದ ಕಮಲಾ ಹಾಗೂ ಸುಜನ್ಯ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ಭೇಟಿ ನೀಡಿದ್ದಾರೆ.

Also Read  ಕಡಬದ ಪಿಲ್ಯ ಫ್ಯಾಷನ್‌ ವೆಡ್ಡಿಂಗ್ ಸೆಂಟರ್‌ನಲ್ಲಿ 'ಮಳೆಗಾಲದ ವಿಶೇಷ ಆಫರ್' ➤ ಪ್ರತೀ ಖರೀದಿಗೆ ಲಕ್ಕೀ ಕೂಪನ್ ಯೋಜನೆ ➤ ಸ್ವಾತಂತ್ರ್ಯೋತ್ಸವದಂದು ಯಮಹಾ ಫ್ಯಾಸಿನೋ ಗೆಲ್ಲುವ ಅವಕಾಶ

error: Content is protected !!
Scroll to Top