ಸಮವಸ್ತ್ರ ಬಟ್ಟೆ ಮರಳಿಸುತ್ತಿರುವ ವಿದ್ಯಾರ್ಥಿಗಳು!

(ನ್ಯೂಸ್ ಕಡಬ)newskadaba.com ಕೊಪ್ಪಳ,ಫೆ.07.  ಸರ್ಕಾರದ ಸುತ್ತೋಲೆಯಂತೆ ಶಾಲಾ ಸಮವಸ್ತ್ರಗಳನ್ನು ಸಿದ್ಧ(ಹೊಲಿಸಿ) ಉಡುಪು ಕೊಡಬೇಕೆಂಬ ನಿಯಮವಿದ್ದರೂ ಬಟ್ಟೆನೀಡುತ್ತಿರುವುದನ್ನು ವಿರೋಧಿಸಿ ವಿದ್ಯಾರ್ಥಿಗಳು ಸಮವಸ್ತ್ರದ ಬಟ್ಟೆಯನ್ನು ಶಾಲೆಗೆ ಮರಳಿಸಿದ್ದಾರೆ ಎಂದು ವರದಿಯಾಗಿದೆ.

ತಾಲೂಕಿನ ಕಿನ್ನಾಳ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಮಂಜುನಾಥ ಪೂಜಾರ ಸೇರಿದಂತೆ ಅನೇಕ ವಿದ್ಯಾರ್ಥಿಗಳು ತಮ್ಮ ಸಮವಸ್ತ್ರದ ಬಟ್ಟೆಯನ್ನು ಶಾಲೆಗೆ ಮರಳಿಸಿದ್ದಾರೆ. ನಿಯಮಾನುಸಾರ ಸಮವಸ್ತ್ರಗಳನ್ನು ಸಿದ್ಧ ಮಾಡಿ ಕೊಡಬೇಕು. ಆದರೂ ಕೊಡುತ್ತಿಲ್ಲ. ಹೀಗಾಗಿ ಬಟ್ಟೆಯನ್ನು ಮರಳಿಸುತ್ತಿದ್ದೇವೆ ಎಂದು ವಿದ್ಯಾರ್ಥಿಗಳು ಲಿಖಿತವಾಗಿ ಮುಖ್ಯಶಿಕ್ಷಕರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ತಿಳಿಸಿದ್ದಾನೆ ಎಂದು ವರದಿ ತಿಳಿಸಿದೆ.

Also Read  ಹೊಸ ವರ್ಷದಿಂದ ಮೆಟ್ರೋ ಟಿಕೆಟ್‌ ಮೇಲೆ ಭಾರೀ ರಿಯಾಯಿತಿ                    

 

error: Content is protected !!