(ನ್ಯೂಸ್ ಕಡಬ)newskadaba.com ಮಂಜೇಶ್ವರ, ಫೆ.07. ಮನೆಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು ನಗದು ಮತ್ತು 11 ಸಾವಿರ ರೂ. ಮೌಲ್ಯದ ಬೆಲೆ ಬಾಳುವ ವಾಚ್ ಕಳವುಗೈದ ಘಟನೆ ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಬ್ದುಲ್ ಹಮೀದ್ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ ಎಂದು ತಿಳಿದುಬಂದಿದೆ. ಹಮೀದ್ ಮತ್ತು ಕುಟುಂಬಸ್ಥರು ಮನೆಗೆ ಬೀಗ ಹಾಕಿ ನಾಲ್ಕು ದಿನಗಳ ಹಿಂದೆ ಬೆಂಗಳೂರಿಗೆ ತೆರಳಿದ್ದರು. ಈ ನಡುವೆ ಕಳವು ನಡೆದಿದೆ. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
