ಬ್ಯಾಂಕ್ ನಲ್ಲಿ ಕಳವು ಮಾಡಲು ಯತ್ನ ➤  ಆರೋಪಿ ಅರೆಸ್ಟ್.!

(ನ್ಯೂಸ್ ಕಡಬ)newskadaba.com ಹೊಸನಗರ, ಫೆ.06. ಇಲ್ಲಿನ ಪಿಕಾರ್ಡ್ ಬ್ಯಾಂಕ್‌ನಲ್ಲಿ ಕಳವು ಮಾಡಲು ಯತ್ನಿಸಿದ್ದ ಆರೋಪಿಯನ್ನು ಹೊಸನಗರ ಪೊಲೀಸರು ಬಂಧಿಸಿದ್ದಾರೆ.

ಬ್ಯಾಂಕ್ ಮುಂಭಾಗದ ಎರಡು ಬಾಗಿಲು ಬೀಗ ಮುರಿದು ಒಳ ನುಗ್ಗಿದ ಆರೋಪಿ, ಅಲ್ಲಿ ಹಣಕ್ಕಾಗಿ ಹುಡುಕಾಡುತ್ತಿರುವಾಗ ಶಬ್ದ ಕೇಳಿ ಅಕ್ಕ ಪಕ್ಕದ ಕಾವಲುಗಾರರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಪೊಲೀಸರು ಬರುವ ಮುನ್ನವೇ ಆರೋಪಿ ಅಲ್ಲಿಂದ ಓಡಿ ಹೋಗಿದ್ದಾನೆ. ಬ್ಯಾಂಕ್ ಪಿಗ್ಮಿ ಸಂಗ್ರಾಹಕ, ಕಾವಲುಗಾರರ ಸಹಕಾರದಿಂದ ಪೊಲೀಸರು ಹಿಡಿಯಲು ಪ್ರಯತ್ನಿಸಿದರು.

ಹೆಲ್ಮೆಟ್‌ ಹಾಕಿಕೊಂಡು ಓಡುತ್ತಿದ್ದ ಆರೋಪಿ ಓಡಿ ಓಡಿ ಸುಸ್ತಾದ್ದರಿಂದ ಹೆಲ್ಮೆಟ್‌ ತೆಗೆದಾಗ, ಆರೋಪಿ ಕಬಾಬ್‌ ಗಣೇಶ್‌ ಎಂದು ಸ್ಥಳೀಯರಿಂದ ಗುರುತು ಪತ್ತೆಯಾಗಿದೆ.

Also Read  ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಹೊಸ ಅಥಿತಿಗಳ ಕಲರವ

 

error: Content is protected !!
Scroll to Top