ಸೀರೆಗಾಗಿ ಪ್ರಾಣ ಕಳೆದುಕೊಂಡ ನಾಲ್ವರು ಮಹಿಳೆಯರು!

(ನ್ಯೂಸ್ ಕಡಬ)newskadaba.com ತಮಿಳುನಾಡು, ಫೆ.06. ಖಾಸಗಿ ಸಂಸ್ಥೆಯೊಂದು ಹಬ್ಬದ ಆಚರಣೆಯ ಅಂಗವಾಗಿ ಉಚಿತ ಸೀರೆಗಳನ್ನು ವಿತರಿಸುತ್ತಿದ್ದ ವೇಳೆ ಕಾಲ್ತುಳಿತದಲ್ಲಿ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸುಮಾರು 1,000 ಮಹಿಳೆಯರು ಸೀರೆಗಳನ್ನು ವಿತರಿಸುವ ಸ್ಥಳಕ್ಕೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಾಲ್ತುಳಿತ ಸಂಭವಿಸಿ ಅನೇಕ ಮಹಿಳೆಯರು ಗಾಯಗೊಂಡಿದ್ದಾರೆ. ವಾಣಿಯಂಬಾಡಿ ತಾಲೂಕಿನ ಆಸ್ಪತ್ರೆಗೆ ಹಲವು ಮಹಿಳೆಯರನ್ನು ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

 

 

error: Content is protected !!
Scroll to Top