➤ ಪಿಂಚಣಿದಾರರಿಗೆ ಸಿಹಿ ಸುದ್ದಿ ಪಿಂಚಣಿ ಮೊತ್ತ ಶೇಕಡಾ 50ರಷ್ಟು  ಹೆಚ್ಚಳ

(ನ್ಯೂಸ್ ಕಡಬ) newskadaba.com. ಬೆಂಗಳೂರು, ಫೆ.6.  ಸರ್ಕಾರದಿಂದ ಪಡೆಯುವ ಪಿಂಚಣಿ ಶೇಕಡಾ 50ರಷ್ಟು ಹೆಚ್ಚಾಗಲಿದ್ದು,  ಪಿಂಚಣಿದಾರರಿಗೆ ಇದು ಸಂತಸದ ಸುದ್ದಿಯಾಗಿದೆ.  2006 ರಲ್ಲಿ ನಿವೃತಿಯಾದ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳು ರಾಜ್ಯ ಸರ್ಕಾರದಿಂದ ಈ ಪ್ರಯೋಜನವನ್ನು ಪಡೆಯಲಿದ್ದಾರೆ.

 

80 ರಿಂದ 85 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರು ಶೇಕಡಾ 20 ರಷ್ಷು ಹೆಚ್ಚುವರಿ ಪಿಂಚಣಿಯ ಲಾಭವನ್ನು ಪಡೆಯುತ್ತಾರೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. 85 ರಿಂದ 90 ವರ್ಷ ವಯಸ್ಸಿನ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರು ಶೇಕಡಾ 30 ರಷ್ಟು ಹೆಚ್ಚು ಪಿಂಚಣಿ ಪಡೆಯುತ್ತಾರೆ. ಜೊತೆಗೆ 90 ವರ್ಷದಿಂದ 95 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪಿಂಚಣಿದಾರರು ಮತ್ತು ಕುಟುಂಬ ಪಿಂಚಣಿದಾರರು ಪರಿಷ್ಕೃತ  ಮೂಲ ಪಿಂಚಣಿ ಅಥವಾ ಕುಟುಂಬ ಪಿಂಚಣಿಯಲ್ಲಿ 40 ಪ್ರತಿಶತ ಹೆಚ್ಚು ಪಡೆಯುತ್ತಾರೆ. 95 ರಿಂದ 100 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪಿಂಚಣಿದಾರರು ಶೇಕಡಾ 50 ರಷ್ಟು ಹೆಚ್ಚಿನ ಪಿಂಚಣಿ ಮೊತ್ತವನ್ನು ಪಡೆಯುತ್ತಾರೆ ಇದಲ್ಲದೆ 100 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರಿಗೆ 100 ಪ್ರತಿಶತ ಹೆಚ್ಚುವರಿ ಪಿಂಚಣಿ ಮೊತ್ತ ಸಿಗುತ್ತದೆ ಎಂದು ತಿಳಿದು ಬಂದಿದೆ.

Also Read  ರಾಜಭವನ ಛಲೋ- ರಾಜ್ಯಪಾಲರ ಭೇಟಿಯಾದ ಕಾಂಗ್ರೆಸ್ ಮುಖಂಡರು

 

error: Content is protected !!
Scroll to Top