ಚೂರಿ ಹಿಡಿದು ಸಾರ್ವಜನಿಕರ ಹೆದರಿಸುತ್ತಿದ್ದ ವ್ಯಕ್ತಿ ➤ ಗುಂಡು ಹಾರಿಸಿ ಬಂಧಿಸಿದ ಪೊಲೀಸರು..!

(ನ್ಯೂಸ್ ಕಡಬ)newskadaba.com ಕಲಬುರಗಿ, ಫೆ.06. ಸೂಪರ್‌ ಮಾರ್ಕೆಟ್‌ನಲ್ಲಿ ಚೂರಿ ಹಿಡಿದು ಜನರನ್ನು ಬೆದರಿಸುತ್ತಿದ್ದ ಕಿಡಿಗೇಡಿಯೊಬ್ಬನ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಅಬ್ದುಲ್ ಜಾಫರ್‌ ಸಾಬ್ ಬಂಧಿತ ವ್ಯಕ್ತಿಯಾಗಿದ್ದಾನೆ. ಈತ ಸುಮಾರು ಒಂದು ಗಂಟೆ ಕಾಲ ಕೈಯಲ್ಲಿ ಚೂರಿ ಹಿಡಿದು ರಸ್ತೆಯಲ್ಲಿ ತಿರುಗಾಡಿ ಜನರಲ್ಲಿ ಭೀತಿ ಸೃಷ್ಟಿಸುತ್ತಿದ್ದ.


ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಪೊಲೀಸರು, ಶರಣಾಗುವಂತೆ ಸೂಚಿಸಿದ್ದರು. ಆದರೆ, ಆರೋಪಿ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ.
ಹೀಗಾಗಿ, ಪಿಎಸ್‌ಐ ವಾಹಿದ್ ಕೊತ್ವಾಲ್ ಆರೋಪಿಯತ್ತ ಮೂರು ಸುತ್ತು ಗುಂಡು ಹಾರಿಸಿದರು. ಕೊನೆಯ ಗುಂಡು ಆತನ ಕಾಲಿಗೆ ಬಡಿದಿದ್ದರಿಂದ ಕೆಳಗೆ ಬಿದ್ದಿದ್ದಾರೆ. ಕೂಡಲೇ ಆರೋಪಿಯನ್ನು ಸುತ್ತುವರೆದ ಪೊಲೀಸರು ಆತನನ್ನು ಬಂಧನಕ್ಕೊಳಪಡಿಸಿದ್ದಾರೆ.

Scroll to Top