ನಿಲ್ಲದ ಜಿಎಸ್​ಟಿ ಮೋಸ; ನಕಲಿ ಇನ್ ​ವಾಯ್ಸ್​ ಸೃಷ್ಟಿ ➤ 6 ವರ್ಷದಲ್ಲಿ 68,000 ಕೋಟಿ ರೂ. ಲೂಟಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.06. 2023ರ ಜನವರಿಯಲ್ಲಿ 2ನೇ ಬಾರಿಗೆ ಅತಿಹೆಚ್ಚು ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಸಂಗ್ರಹವಾಗಿರುವ ದಾಖಲೆ ಬೆನ್ನಲ್ಲೇ, ದೇಶಾದ್ಯಂತ ಬೋಗಸ್ ಇನ್​ ವಾಯ್ಸ್ ಗಳನ್ನು ಸೃಷ್ಟಿಸಿ ಸಾವಿರಾರು ಕೋಟಿ ರೂ. ವಂಚಿಸುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವ ವಿಚಾರವೂ ಬೆಳಕಿಗೆ ಬಂದಿದೆ.

‘ಅಡ್ಡದಾರಿ’ಯಲ್ಲಿ ತೆರಿಗೆ ಸೋರಿಕೆ ತಡೆಯುವ ಉದ್ದೇಶದಿಂದ ಎಷ್ಟೇ ಬಿಗಿ ನಿಯಮಗಳನ್ನು ತಂದರೂ ತೆರಿಗೆ ವಂಚಕರ ಹೆಡೆಮುರಿ ಕಟ್ಟಲು ಸಾಧ್ಯವಾಗುತ್ತಿಲ್ಲ. 2022ರ ಏಪ್ರಿಲ್​ನಲ್ಲಿ 1.68 ಲಕ್ಷ ಕೋಟಿ ಜಿಎಸ್​ಟಿ ಸಂಗ್ರಹವಾಗಿತ್ತು. ಈಗ 2023ರ ಜನವರಿ ಯಲ್ಲಿ 2ನೇ ಬಾರಿಗೆ ಅತಿಹೆಚ್ಚು 1.55 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ. ಅದೇ ರೀತಿ ವಂಚನೆಯಲ್ಲೂ ದಾಖಲೆ ಸೃಷ್ಟಿಯಾಗಿದೆ. 2017-18ರಲ್ಲಿ ಜಿಎಸ್​ಟಿ ಜಾರಿಯಾದ ಮೊದಲ ವರ್ಷ 12 ಕೋಟಿ ರೂ. ವಂಚನೆ ಪ್ರಕರಣಗಳು ಪತ್ತೆಯಾಗಿದ್ದವು. ನಂತರ 2018-19ರಲ್ಲಿ 11,251 ಕೋಟಿ ರೂ. ವಂಚನೆ ಪತ್ತೆಯಾಗಿತ್ತು. 2017ರ ಜು.1ರಿಂದ 2019 ಜೂ.25ರವರೆಗೆ 13,829 ಕೋಟಿ ರೂ. ಹಾಗೂ 2020-21 ಹಾಗೂ 2021-22ರಲ್ಲಿ 55,575 ಕೋಟಿ ರೂ. ವಂಚನೆ ನಡೆದಿದೆ. 2017ರಲ್ಲಿ ಜಿಎಸ್​ಟಿ ಜಾರಿಯಾದಾಗಿನಿಂದ ಈವರೆಗೆ 68 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮೋಸ ನಡೆದಿದೆ.

Also Read  ದಿನ ಭವಿಷ್ಯ - ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್

 

error: Content is protected !!
Scroll to Top