(ನ್ಯೂಸ್ ಕಡಬ)newskadaba.com ಪುತ್ತೂರು, ಫೆ.05. ಶಿಕ್ಷಕಿಯೋರ್ವರು ಶಾಲಾ ಮುಖ್ಯ ಶಿಕ್ಷಕರು ಹಾಗೂ ಎಸ್‌ಡಿಎಂಸಿಯವರಿಗೆ ತಿಳಿಸದೆ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದ ಘಟನೆ ಚಿಕ್ಕಮುಡ್ನೂರು ಗ್ರಾಮದ ಬೀರ್ನಹಿತ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಚಿಕ್ಕಮುಡ್ನೂರು ಬೀರ್ನಹಿತ್ಲು ಶಾಲೆಯ ಮೂರನೇ ಹಾಗೂ ಒಂದನೇ ತರಗತಿ ಮಕ್ಕಳನ್ನು ಶಿಕ್ಷಕಿಯೋರ್ವರು ಶಾಲಾ ಮುಖ್ಯ ಶಿಕ್ಷಕರು ಹಾಗೂ ಎಸ್‌ಡಿಎಂಸಿಯವರಿಗೆ ತಿಳಿಸಿದೆ ಕರೆದುಕೊಂಡು ಹೋಗಿದ್ದು, ಈ ಕುರಿತು ಪೋಷಕರು ಮತ್ತು ಸಾರ್ವಜನಿಕರು ಆರೋಪಿಸಿದ್ದಾರೆ. ಶಾಲೆಯಲ್ಲಿ ಪತ್ರವೊಂದು ದೊರೆತಿದ್ದು, ಅದರಲ್ಲಿ ಪ್ರವಾಸಕ್ಕೆ ಹೋಗುವ ಸ್ಥಳಗಳನ್ನು ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ಶಾಲೆಗೆ ಆಗಮಿಸಿದ ಪೋಷಕರು ಮತ್ತು ಸಾರ್ವಜನಿಕರು ಸಹಶಿಕ್ಷಕರು ಹಾಗೂ ಎಸ್‌ಡಿಎಂಸಿಯವರಲ್ಲಿ ವಿಚಾರಿಸಿದಾಗ ಈ ಕುರಿತು ನಮಗೆ ತಿಳಿದಿಲ್ಲ, ಮುಖ್ಯ ಶಿಕ್ಷಕರ ಗಮನಕ್ಕೂ ತಿಳಿಸದೆ ಕರೆದುಕೊಂಡು ಹೋಗಿದ್ದಾರೆ. ಚಿಕ್ಕ ಮಕ್ಕಳಾದ ಕಾರಣ ಏನಾದರೂ ತೊಂದರೆ ಆದರೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.