ಪಡುಬಿದ್ರಿ: ಪೋಕ್ಸೋ ಪ್ರಕರಣ; ಕರಾಟೆ ಶಿಕ್ಷಕನಿಗೆ 22 ವರ್ಷ ಜೈಲು ಶಿಕ್ಷೆ

(ನ್ಯೂಸ್ ಕಡಬ)newskadaba.com  ಪಡುಬಿದ್ರೆ, ಫೆ.05. ಕರಾಟೆ ಕಲಿಯಲು ತನ್ನ ತರಬೇತಿ ಕೇಂದ್ರಕ್ಕೆ ಬರುತ್ತಿದ್ದ 12 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕರಾಟೆ ತರಬೇತುದಾರ ಹಾಗೂ ಪಡುಬಿದ್ರಿ ಸಮೀಪದ ಹೆಜಮಾಡಿ ನಿವಾಸಿ ಉಮೇಶ್ ಬಂಗೇರ (48) ಎಂಬಾತನಿಗೆ 22 ವರ್ಷ ಜೈಲು ಶಿಕ್ಷೆ, ದಂಡ ವಿಧಿಸಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀನಿವಾಸ್ ಸುವರ್ಣ ಅವರು ತೀರ್ಪು ನೀಡಿದ್ದಾರೆ.

ಅಪರಾಧಿ ಪಡುಬಿದ್ರಿಯಲ್ಲಿ ಕರಾಟೆ ತರಗತಿ ನಡೆಸುತ್ತಿದ್ದು, ಕರಾಟೆ ತರಗತಿಗೆ ಬಂದಿದ್ದ 12 ವರ್ಷ ವಯಸ್ಸಿನ ಬಾಲಕಿ ಮೇಲೆ ತರಗತಿ ಮುಗಿದ ಬಳಿಕ ದೈಹಿಕ ದೌರ್ಜನ್ಯ ಎಸಗಿದ್ದ. ಅಲ್ಲದೆ ಈ ವಿಚಾರ ಯಾರಲ್ಲೂ ಹೇಳಬಾರದೆಂದು ಆತ ಬಾಲಕಿಗೆ ಬೆದರಿಕೆ ಹಾಕಿದ್ದ.

Also Read  ರಫೆಲ್ ಯುದ್ಧ ವಿಮಾನ ವಿಂಗ್‌ ಕಮಾಂಡರ್‌ ಅರುಣ್‌ ಕುಮಾರ್‌ ನನ್ನಹೆಮ್ಮೆಯ ಶಿಷ್ಯ ➤ ಸುಳ್ಯ ಶಿಕ್ಷಕ ದಾಮೋದರ್

error: Content is protected !!
Scroll to Top