ಉಳ್ಳಾಲ: ವೀರ ರಾಣಿ ಅಬ್ಬಕ್ಕನ ಥೀಮ್ ಪಾರ್ಕ್ ನಿರ್ಮಾಣವಾಗಬೇಕು ➤ ಶೋಭಾ ಕರಂದ್ಲಾಜೆ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.05. ತೊಕ್ಕೊಟ್ಟಿನ ಉದ್ದೇಶಿತ ಜಾಗದಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕ ಹೆಸರಲ್ಲಿ ಭವನ ನಿರ್ಮಾಣ ಮಾತ್ರವಲ್ಲದೆ ಜೀಟಿಗೆ ಹಿಡಿದು ಪೋರ್ಚುಗೀಸರನ್ನ ಸೋಲಿಸಿದ ವೀರರಾಣಿಯ ಚರಿತ್ರೆ ದೇಶಕ್ಕೆ ತಿಳಿಸುವ ಥೀಮ್ ಪಾರ್ಕ್ ನಿರ್ಮಾಣವಾಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಹೇಳಿದ್ದಾರೆ.

ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ನೆರಳಲ್ಲಿ ಉಳ್ಳಾಲದ ಮಹಾತ್ಮ ಗಾಂಧಿ ರಂಗ ಮಂದಿರದಲ್ಲಿ ನಡೆದ “ವೀರ ರಾಣಿ ಅಬ್ಬಕ್ಕ ಉತ್ಸವ”ದಲ್ಲಿ ಸಭಾಧ್ಯಕ್ಷತೆ ವಹಿಸಿ ಶೋಭಾ ಕರಂದ್ಲಾಜೆಯವರು ಮಾತನಾಡಿದರು. ರಾಣಿ ಅಬ್ಬಕ್ಕನಂತಹ ವೀರ ವನಿತೆಯರು ಬರೀ ಚರಿತ್ರೆಯಲ್ಲಿ ಅಷ್ಟೇ ಅಲ್ಲ, ಆಕೆಯ ಹೆಸರು ದೇಶದಾದ್ಯಂತ ವ್ಯಾಪಿಸಲು ರಾಜ್ಯ ಮಟ್ಟದ ಅಬ್ಬಕ್ಕ ಉತ್ಸವ ನಡೆಯುವಂತಾಗಬೇಕು ಎಂದರು.

Also Read  ಕಡಬ: ಅನ್ನಭಾಗ್ಯದ ಅಕ್ಕಿ ಜೊತೆ ಕಲ್ಲು ಹಾಗೂ ಕಲಬೆರಕೆ ವಸ್ತುಗಳು ಫ್ರೀ- ಅಧಿಕಾರಿಗಳಿಂದ ಪರಿಶೀಲನೆ

 

error: Content is protected !!
Scroll to Top