(ನ್ಯೂಸ್ ಕಡಬ)newskadaba.com ಕಾಸರಗೋಡು, ಫೆ.04. ಕಾಸರಗೋಡು ನಿಲ್ದಾಣದಲ್ಲಿ ರೈಲಿನಿಂದ ಬಂದಿಳಿದ ಚೆರ್ಕಳ ಸಿಟಿಜನ್ ನಗರದ ಮೊಹಮ್ಮದ್ ಫಾಹಿಸ್ (34) ಎಂಬಾತನ ಬ್ಯಾಗ್ ತಪಾಸಣೆ ಮಾಡಿದಾಗ 1.300 ಕಿಲೋ ಚಿನ್ನ ಪತ್ತೆಯಾಗಿದ್ದು, ಆತನನ್ನು ಕಸ್ಟಂಸ್ ತಂಡ ಬಂಧಿಸಿದೆ. ಚಿನ್ನ ಸಾಗಾಟದ ಬಗ್ಗೆ ಕಾಸರಗೋಡು ಕಸ್ಟಮ್ಸ್ ಯೂನಿಟ್‌ನ ಸೂಪರಿಂಟೆಂಡೆಂಟ್ ಪಿ.ಟಿ.ರಾಜೀವ್ ಅವರಿಗೆ ರಹಸ್ಯ ಮಾಹಿತಿ ಲಭಿಸಿತ್ತು.
ಅದರಂತೆ ಅವರು ಮತ್ತು ಕಾಸರಗೋಡು ಕಸ್ಟಮ್ಸ್ ವಿಭಾಗದ ಹೆಡ್ ಹವಾಲ್ದಾರ್‌ಗಳಾದ ಆನಂದ ಕೆ. ಚಂದ್ರಶೇಖರ ಕೆ. ಮತ್ತು ವಿಶ್ವನಾಥ ಎಂ. ನೇತೃತ್ವದ ತಂಡ ರೈಲು ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿ 76 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿದೆ. ಬ್ರೆಡ್ ರೋಸ್ಟ್ ತಯಾರಿಸುವ ಮೋಟಾರ್‌ನೊಳಗೆ ಚಿನ್ನವನ್ನು ಬಚ್ಚಿಡಲಾಗಿತ್ತು.