(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.04. ಸ್ಯಾಮ್ ಸಂಗ್ ಕಂಪೆನಿ ಅತ್ಯುನ್ನತ ಶ್ರೇಣಿಯಾದ ಎಸ್ ಸರಣಿಯಲ್ಲಿ ವರ್ಷಕ್ಕೊಮ್ಮೆ ಮೊಬೈಲ್ ಗಳನ್ನು ವಿಶ್ವ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ಇದೀಗ ಗೆಲಾಕ್ಸಿ ಎಸ್ 23 ಸರಣಿಯ 3 ಫೋನ್ ಗಳನ್ನು ಭಾರತ ಸೇರಿ ಅನೇಕ ದೇಶಗಳಲ್ಲಿ ಬಿಡುಗಡೆ ಮಾಡಲಾಯಿತು. ಗೆಲಾಕ್ಸಿ ಎಸ್ 23 ಅಲ್ಟ್ರಾ, ಎಸ್ 23 ಪ್ಲಸ್ ಹಾಗೂ ಎಸ್ 23 ಈ ಹೊಸ ಮೊಬೈಲ್‌ಗಳು.
ಈ ಫೋನ್ ಗಳು ಭಾರತದ ನೋಯ್ಡಾದಲ್ಲಿರುವ ಸ್ಯಾಮ್ ಸಂಗ್ ಕಾರ್ಖಾನೆಯಲ್ಲಿ ತಯಾರಾಗಿವೆ ಎಂದು ಕಂಪೆನಿ ತಿಳಿಸಿದೆ. ಎಸ್ 23 ಸರಣಿಯ ಫೋನ್ ಗಳನ್ನು ಭಾರತದಲ್ಲೇ ತಯಾರಿಸಬೇಕೆಂಬ ಬದ್ಧತೆಯನ್ನು ಸ್ಯಾಮ್ ಸಂಗ್ ಹೊಂದಿತ್ತು ಎಂದು ಕಂಪೆನಿ ತಿಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ವಿಶ್ವದಲ್ಲೇ ಅತಿ ದೊಡ್ಡದಾದ ಮೊಬೈಲ್ ತಯಾರಿಕಾ ಕಾರ್ಖಾನೆಯನ್ನು 2018ರಲ್ಲಿ ಉದ್ಘಾಟಿಸಿದ್ದರು. ವಿಶ್ವದಲ್ಲೇ ದೊಡ್ಡದಾದ ಮೊಬೈಲ್ ಎಕ್‌ಸ್ಪೀರಿಯನ್‌ಸ್ ಕೇಂದ್ರವಾದ ಸ್ಯಾಮ್ ಸಂಗ್ ಒಪೆರಾ ಹೌಸ್ ಬೆಂಗಳೂರಿನಲ್ಲಿದೆ ಎಂದು ಕಂಪೆನಿ ತಿಳಿಸಿದೆ.