ಪತ್ನಿಯನ್ನು ಕೊಂದು ಮೃತದೇಹ ಹೊಲದಲ್ಲಿ ಹೂತ ಪತಿ

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ, ಫೆ.04. ಗಾಜಿಯಾಬಾದ್‌ನಲ್ಲಿ ವ್ಯಕ್ತಿಯೊಬ್ಬ ಅಕ್ರಮ ಸಂಬಂಧ ಶಂಕೆಯಿಂದ ತನ್ನ ಪತ್ನಿಯನ್ನು ಕೊಂದು ಹೊಲದಲ್ಲಿ ಗುಂಡಿ ತೆಗೆದು 30 ಕೆಜಿ ಉಪ್ಪು ಹಾಕಿ ಹೂತು ಅದೇ ಜಾಗದಲ್ಲಿ ರಾಗಿ ಬೇಸಾಯ ಕೂಡ ಮಾಡಿರುವ ಘಟನೆ ನಡೆದಿದೆ.

ಆರೋಪಿ ಪತಿ ದಿನೇಶ್ ತನ್ನ ಹೆಂಡತಿ ಅಂಜು ಇದ್ದಕ್ಕಿದ್ದಂತೆ ಎಲ್ಲೋ ಹೋಗಿದ್ದಾಳೆ. ನನಗೆ ಯಾವುದೇ ಸುಳಿವು ನೀಡಿಲ್ಲ ಎಂದು ಭೋಜ್‌ಪುರ ಠಾಣೆಗೆ ಬಂದು ಪೊಲೀಸರಿಗೆ ದೂರು ನೀಡಿದ್ದಾನೆ.

ಇನ್ನು ದಿನೇಶ್ ದೂರಿನ ಮೇರೆಗೆ, ಗಾಜಿಯಾಬಾದ್‌ನ ಭೋಜ್‌ಪುರ ಪೊಲೀಸ್ ಠಾಣೆಯಲ್ಲಿ ಮಹಿಳೆಯ ನಾಪತ್ತೆಯ ತನಿಖೆಯನ್ನು ಪೊಲೀಸರು ಪ್ರಾರಂಭಿಸಿದ್ದು, ವಿಚಾರಣೆಯ ಸಮಯದಲ್ಲಿ, ಪೊಲೀಸರು ಆಕೆಯ ಪತಿಯನ್ನು ಅನುಮಾನಿಸಿದ್ದರು. ಈ ವೇಳೆ ದಿನೇಶ್‌ನನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರು ಕೊಲೆಯ ಮಾಹಿತಿಯನ್ನು ಬಾಯ್ಬಿಡಿಸಿದ್ದು, ದಿನೇಶ್‌ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

Also Read  ಕಾಶ್ಮೀರ: ಕಳೆದ ಐದು ದಿನಗಳಿಂದ ಹಿಮದಲ್ಲಿ ಸಿಲುಕಿ ಯೋಧ  ನಾಪತ್ತೆ

 

 

error: Content is protected !!
Scroll to Top