➤ತಾಯಿಗೆ ಬೆಂಕಿ ಹಚ್ಚಿದ ನಂತರ ತಂದೆಗೂ ಜೀವ ಬೆದರಿಕೆ ಹಾಕಿದ ದತ್ತು ಪುತ್ರ

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.4. ದತ್ತು ಪುತ್ರನೊಬ್ಬ ತನ್ನ ತಾಯಿಯನ್ನು ಸುಟ್ಟುಹಾಕಿದ್ದು, ತನ್ನ ತಂದೆಗೂ ಜೀವ ಬೆದರಿಕೆಯೊಡ್ಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆತನನ್ನು ಬಂಧಿಸಲಾಗಿದೆ. ಆರೋಪಿಯನ್ನು ಉತ್ತಮ್ ಕುಮಾರ್ ಎಂದು ಗುರುತಿಸಲಾಗಿದೆ. ಮಂಜುನಾಥ್ ಮತ್ತು ಆತನ ಪತ್ನಿಯು ತಮಗೆ ಮಕ್ಕಳಿಲ್ಲದ ಕಾರಣ ಆರೋಪಿಯನ್ನು ದತ್ತು ಪಡೆದಿದ್ದರು ಎಂದು ತಿಳಿದು ಬಂದಿದೆ.

ಆದರೆ, ಉತ್ತಮ್ ಕುಮಾರ್ ಪೋಷಕರಿಗೆ ಅಗೌರವ ತೋರಿ ಅವರ ಮೇಲೆ ದ್ವೇಷ ಬೆಳೆಸಿಕೊಂಡಿದ್ದನು. 2018ರಲ್ಲಿ ತನ್ನ ದತ್ತು ಪಡೆದ ತಾಯಿಯನ್ನು ಸುಟ್ಟು ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಂತರ ಜೈಲು ಪಾಲಾಗಿದ್ದ ಮತ್ತು ಬಿಡುಗಡೆಯಾದ ಬಳಿಕ ತಂದೆಗೆ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

Also Read  ಆತೂರು: ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ವಾಹನ ಅಪಘಾತ ➤ ತಾಯಿಯ ಕಣ್ಣೆದುರಲ್ಲೇ ಪ್ರಾಣಬಿಟ್ಟ ದ್ವಿಚಕ್ರ ವಾಹನ ಸವಾರ

ತಂದೆ ಮಂಜುನಾಥ್ ಐದು ಮನೆಗಳನ್ನು ಹೊಂದಿದ್ದು, ಅವುಗಳಿಂದ ಬರುವ ಬಾಡಿಗೆ ಹಣವನ್ನು ತಾನು ಪಡೆಯಬೇಕೆಂದು ಆರೋಪಿ ಬಯಸಿದ್ದನು. ಮಂಜುನಾಥ್ ಇದಕ್ಕೆ ನಿರಾಕರಿಸಿದಾಗ ಅವರಿಗೆ ಜೀವ ಬೆದರಿಕೆಯೊಡ್ಡಿದ್ದಾನೆ. ಸದ್ಯ ಆರೋಪಿ ಜೈಲು ಸೇರಿದ್ದಾನೆ.

error: Content is protected !!
Scroll to Top