ಮಕ್ಕಳಿಬ್ಬರಿಗೆ ಢಿಕ್ಕಿಯಾಗಿ ನೂರಾರು ಮೀಟರ್ ಎಳೆದೊಯ್ದ ರೈಲು ➤ ಓರ್ವ ಮಗು ಮೃತ್ಯು

(ನ್ಯೂಸ್ ಕಡಬ)newskadaba.com ಜರ್ಮನಿ, ಫೆ.03. ಮಕ್ಕಳಿಬ್ಬರಿಗೆ ರೈಲು ಢಿಕ್ಕಿ ಹೊಡೆದು ಸುಮಾರು ನೂರಕ್ಕೂ ಹೆಚ್ಚು ಮೀಟರ್‌ವರೆಗೆ ಎಳೆದೊಯ್ದ ಹೃದಯ ವಿದ್ರಾವಕ ಘಟನೆ ಜರ್ಮನಿಯಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ಮಗು ಮೃತಪಟ್ಟಿದ್ದು, ಮತ್ತೊಬ್ಬ ಮಗು ಗಂಭೀರ ಗಾಯಗೊಂಡಿದೆ.

ನಿಲ್ದಾಣಗಳೆರಡರ ನಡುವೆ ಅಪಘಾತ ಸಂಭವಿಸಿದೆ. ಸರಕು ಸಾಗಣೆ ರೈಲು ಮಕ್ಕಳಿಬ್ಬರಿಗೆ ಢಿಕ್ಕಿಯಾಗಿದೆ. ಆದರೆ ಮಕ್ಕಳು ಹಳಿ ಮೇಲೆ ಹೋಗಿದ್ದರೇ ಅಥವಾ ಢಿಕ್ಕಿ ಹೊಡೆಯಲು ಇತರ ಕಾರಣಗಳೇನು ಎಂಬುದು ತಿಳಿದು ಬಂದಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Also Read  18 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಗೆ ವಿಷ ಕುಡಿಸಿದ ದುಷ್ಕರ್ಮಿಗಳು

ಘಟನಾ ಸ್ಥಳದಲ್ಲಿ ಹೆಚ್ಚಿನ ಜನರಿದ್ದರೇ ಅಥವಾ ಇನ್ನಷ್ಟು ಜನ ಗಾಯಗೊಂಡಿದ್ದಾರೆಯೇ ಎಂಬ ಮಾಹಿತಿ ತಿಳಿದು ಬಂದಿಲ್ಲ. ಮಾಹಿತಿ ತಿಳಿದ ತತ್‌ಕ್ಷಣ ಅಗ್ನಿಶಾಮಕ ಸಿಬಂದಿ ಮತ್ತು ರಕ್ಷಣಾ ಕಾರ್ಯಕರ್ತರು ಸ್ಥಳಕ್ಕೆ ದೌಡಾಯಿಸಿದ್ದಾರೆ.

 

error: Content is protected !!
Scroll to Top