ಬ್ರಹ್ಮಾವರ: 7.26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು..!

Theft, crime, Robbery

(ನ್ಯೂಸ್ ಕಡಬ)newskadaba.com ಬ್ರಹ್ಮಾವರ, ಫೆ.03. ಮದುವೆಗೆಂದು ಲಾಕರ್‌ನಿಂದ ತಂದಿದ್ದ 180.5 ಗ್ರಾಂ ತೂಕದ 7.26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವಾಗಿರುವ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ ಎಮದು ವರದಿ ತಿಳಿಸಿದೆ.


ಹೂಡೆಯ ಅಫ್ರೀನ್‌ ಬಾನು ಅವರು ಹೊನ್ನಾಳದ ತಾಯಿ ಮನೆ ಸಮೀಪ ಸಂಬಂಧಿಕರ ಮನೆಯಲ್ಲಿ ಮದುವೆ ಸಮಾರಂಭ ಮುಗಿಸಿ ಮನೆಗೆ ಹೊರಡುವಾಗ ಚಿನ್ನಾಭರಣವಿದ್ದ ಬ್ಯಾಗನ್ನು ಕಾರಿನಲ್ಲಿ ಇಟ್ಟಿದ್ದರು ಎಂದು ತಿಳಿದುಬಂದಿದೆ.


ತಾಯಿ ಮನೆಯಲ್ಲಿ ಚಹಾ ಕುಡಿದು 15 ನಿಮಿಷದಲ್ಲಿ ಹಿಂದಿರುಗಿದ್ದರು. ಮನೆಗೆ ಮರಳಿ ಸ್ವಲ್ಪ ಸಮಯದಲ್ಲಿ ಬ್ಯಾಗ್‌ ತೆರೆದು ನೋಡುವಾಗ ಚಿನ್ನಾಭರಣ ಕಾಣೆಯಾಗಿತ್ತು ಎಂದು ವರದಿ ಪ್ರಕಟಣೆ ತಿಳಿಸಿದೆ. ಈ ಕುರಿತು ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ನೀತಿ ತಂಡದಿಂದ ಚೀನಾ ವಸ್ತುಗಳ ವಿರೋಧಿ ಅಭಿಯಾನ ► ಪುತ್ತೂರು ತಾಲೂಕಿನ ಇಚಿಲಂಪಾಡಿಯ ನೀತಿ ತಂಡ

 

error: Content is protected !!
Scroll to Top