ಡ್ರಗ್ಸ್ ಹೊತ್ತೊಯ್ಯುತ್ತಿದ್ದ ಪಾಕಿಸ್ತಾನದ ಡ್ರೋನ್‌ಅನ್ನು ಹೊಡೆದುರುಳಿಸಿದ ಬಿಎಸ್ಎಫ್

(ನ್ಯೂಸ್ ಕಡಬ)newskadaba.com ಅಮೃತಸರ, ಫೆ.03. ಮಾದಕ ದ್ರವ್ಯವನ್ನು ಹೊತ್ತೊಯ್ಯುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಪಂಜಾಬ್‌ನ ಅಂತಾರಾಷ್ಟ್ರೀಯ ಗಡಿಯಿಂದ ಭಾರತಕ್ಕೆ ಪ್ರವೇಶಿಸುತ್ತಿದ್ದ ವೇಳೆ ಗಡಿ ಭದ್ರತಾ ಪಡೆಗಳು (ಬಿಎಸ್‌ಎಫ್) ಹೊಡೆದುರುಳಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದ ಅಮೃತಸರ ಸೆಕ್ಟರ್‌ನ ಗಡಿ ಪೋಸ್ಟ್ ಹಿಂಭಾಗದ ಕಕ್ಕರ್ ಬಳಿ ಮಾನವ ರಹಿತ ವೈಮಾನಿಕ ವಾಹನವು ಕೆಳಗಿಳಿದಿದೆ. ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಗಡಿ ಬೇಲಿ ಮತ್ತು ಶೂನ್ಯ ರೇಖೆಯ ನಡುವೆ ಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಕ್ವಾಡ್‌ಕಾಪ್ಟರ್‌ನೊಂದಿಗೆ ಶಂಕಿತ ಹೆರಾಯಿನ್ ಹೊಂದಿರುವ ಮೂರು ಕೆಜಿ ತೂಕದ ಪ್ಯಾಕೆಟ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ.

Also Read  ಬಿಲ್ ಬಾಕಿ ಉಳಿಸಿಕೊಂಡಿದ್ದರೂ ಗೃಹಜ್ಯೋತಿ ಪ್ರಯೋಜನ ಪಡೆಯಬಹುದು - ಬೆಸ್ಕಾಂ ಮಹತ್ವದ ಮಾಹಿತಿ..!

 

error: Content is protected !!
Scroll to Top