ಶವಸಂಸ್ಕಾರಕ್ಕೂ ಬಂತು ‘ಸಂಚಾರಿ ಸ್ಮಶಾನ’ !  

(ನ್ಯೂಸ್ ಕಡಬ)newskadaba.com ಉಡುಪಿ, ಫೆ.02. ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಸ್ಥಳದ ಕೊರತೆ ಎದುರಾಗಿದ್ದು, ಈ ಸಮಸ್ಯೆಯನ್ನು ನೀಗಿಸಲು ಕುಂದಾಪುರ ತಾಲೂಕಿನ ಮುದೂರು ಗ್ರಾಮದಲ್ಲಿ ಇತ್ತೀಚಿಗೆ ಸಂಚಾರಿ ಚಿತಾಗಾರವನ್ನು ಆರಂಭಿಸಲಾಗಿದೆ.

ಹಿಂದುಳಿದವರು, ದಲಿತರು ವಾಸಿಸುವ ಭಾಗದಲ್ಲಿ ಐದು ಸೆಂಟ್ಸ್ ಜಾಗವಿರುವ ಕುಟುಂಬಗಳ ಮನೆಯಲ್ಲಿ ಸಾವಿಗೀಡಾದರೆ ಸ್ಮಶಾನಕ್ಕೆ ಕುಂದಾಪುರದ 40 ಕಿ.ಮೀ ದೂರದಲ್ಲಿರುವ ಸ್ಮಶಾನಕ್ಕೆ ಕೊಂಡೊಯ್ಯಬೇಕಿದೆ. ಹೀಗಾಗಿ ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘ (ಎಂಪಿಎಸಿ), ಗ್ರಾಮಸ್ಥರ ಅನುಕೂಲಕ್ಕಾಗಿ ಸಂಚಾರಿ ಶವಸಂಸ್ಕಾರ ವಾಹನವನ್ನು ಪರಿಚಯಿಸಿದೆ.

Also Read  ಉಡುಪಿ: ಬಾರ್ಕೂರಿನ ರಿಶಾ ತಾನ್ಯಾ ಪಿಂಟೋರವರಿಗೆ "ಮಿಸ್ ಟೀನ್ ಕರಾವಳಿ 2024" ಕಿರೀಟ

 

error: Content is protected !!
Scroll to Top