ಕಾಸರಗೋಡು: ಶೆಡ್ ನಲ್ಲಿ ಮಹಿಳೆಯ ಮೃತದೇಹ ಪತ್ತೆ

(ನ್ಯೂಸ್ ಕಡಬ)newskadaba.com ಕಾಸರಗೋಡು, ಫೆ.02. ಪೆರ್ಲ ಸಮೀಪದ ಏಳ್ಕಾನ ಶೇಣಿ ಎಂಬಲ್ಲಿ ರಬ್ಬರ್ ಎಸ್ಟೇಟ್ ನ ಶೆಡ್ ನೊಳಗೆ ಮಹಿಳೆಯೋರ್ವರ ಮೃತದೇಹ ಪತ್ತೆಯಾಗಿದೆ. ಕೊಲ್ಲಂ ಮೂಲದ ನೀತು ಕೃಷ್ಣ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮಹಿಳೆಯ ಪತಿ ವಯನಾಡ್ ಮೂಲದ ಆಂಟೋ ಸೆಬಾಸ್ಟಿಯನ್ ಎಂಬಾತ ನಾಪತ್ತೆಯಾಗಿದ್ದು ಸಂಶಯಕ್ಕೆ ಕಾರಣವಾಗಿದೆ.


ಒಂದೂವರೆ ತಿಂಗಳ ಹಿಂದೆ ಈ ದಂಪತಿ ರಬ್ಬರ್ ಟ್ಯಾಪಿಂಗ್ ವೃತ್ತಿಗಾಗಿ ಆಗಮಿಸಿದ್ದರು. ಇವರು ವಾಸಿಸುತ್ತಿದ್ದ ಮನೆ ಸಮೀಪದ ಶೆಡ್ ನಲ್ಲಿ ಇತರ ಕಾರ್ಮಿಕರಾದ ವೆಳ್ಳರಿಕುಂಡುವಿನ ರಿಜೋ ಹಾಗೂ ಪಶ್ಚಿಮ ಬಂಗಾಳದ ಕಾರ್ಮಿಕರಿಬ್ಬರು ವಾಸವಾಗಿದ್ದರು ಎನ್ನಲಾಗಿದೆ. ನೀತು ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದು, ಪತಿಯಲ್ಲಿ ವಿಚಾರಿಸಿದಾಗ ಊರಿಗೆ ತೆರಳಿದ್ದಾಗಿ ಹೇಳಿದ್ದನು. ಈ ನಡುವೆ ಆಂಟೋ ಸೆಬಾಸ್ಟಿಯನ್ ನಾಪತ್ತೆಯಾಗಿದ್ದು, ಮನೆಯೊಳಗಿನಿಂದ ದುರ್ವಾಸನೆ ಬರತೊಡಗಿದ್ದು, ಸಂಶಯಗೊಂಡ ಎಸ್ಟೇಟ್ ಮ್ಯಾನೇಜರ್ ಹಂಚು ಸರಿಸಿ ನೋಡಿದಾಗ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

Also Read  ಅಧಿಕೃತ ಅಭ್ಯರ್ಥಿಯನೇ ಉಚ್ಚಟಿಸಿದ ಜೆಡಿಎಸ್

 

error: Content is protected !!
Scroll to Top