ಉಳ್ಳಾಲ:  27 ಲಕ್ಷ ಮೌಲ್ಯದ ಭಾರೀ ಪ್ರಮಾಣದ ಗಾಂಜಾ‌ ವಶ   ➤ ಆರೋಪಿಗಳು ಅರೆಸ್ಟ್..!

(ನ್ಯೂಸ್ ಕಡಬ)newskadaba.com ಉಳ್ಳಾಲ, ಫೆ.02. ಕೊಣಾಜೆ ಪೊಲೀಸ್ ಠಾಣಾ ಪಿಎಸ್ಸೈ ಶರಣಪ್ಪ ಭಂಡಾರಿಯವರು ಖಚಿತ ಮಾಹಿತಿ ಮೇರೆಗೆ ಕೇರಳ-ಕರ್ನಾಟಕ ಗಡಿ ಪ್ರದೇಶ ನೆತ್ತಿಲಪದವು ಎಂಬಲ್ಲಿ ಅಕ್ರಮವಾಗಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಕಾರನ್ನು ವಶಕ್ಕೆ ಪಡೆದು ಸುಮಾರು 27 ಲಕ್ಷ ಮೌಲ್ಯದ ಗಾಂಜಾವನ್ನು ಸ್ವಾಧೀನಪಡಿಸಿದ್ದು, ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.

ಕಾಸರಗೋಡು ಜಿಲ್ಲೆಯ ಕಡಪುರಂ ,ಹೊಸಬೆಟ್ಟು ನಿವಾಸಿ ಅಬೂಬಕ್ಕರ್ ಸಿದ್ದೀಕ್(35) ಅಲಿಯಾಸ್ ಹ್ಯಾರೀಸ್, ಕಾಸರಗೋಡು ಜಿಲ್ಲೆಯ ಮುದ್ರಾನ್ ಗ್ರಾಮದ ಕುಂಬಿ ನಿವಾಸಿ ಅಖಿಲ್‌ ಎಮ್(25) ಉದ್ಯಾವರ ,ಮಾಡ ನಿವಾಸಿ ಹೈದರ್ ಆಲಿ(39)ಅಲಿಯಾಸ್ ಗಾಡಿ ಹೈದರ್ ಎಂಬ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ವಶಪಡಿಸಿದ ಸೊತ್ತುಗಳ ಒಟ್ಟು ಮೌಲ್ಯ 32,07,000/- ಎಂದು ಅಂದಾಜಿಸಲಾಗಿದೆ.

Also Read  ಮಂಗಳೂರು: ಮೊಬೈಲ್ ಅಂಗಡಿಯ ಗೋಡೆ ಕುಸಿದು ಓರ್ವನಿಗೆ ಗಾಯ

error: Content is protected !!
Scroll to Top