ಸುಳ್ಯ: ವಿವಾಹಿತೆ ಜೊತೆ ಸಿಕ್ಕಿಬಿದ್ದ ಮುಖಂಡ  ➤ ಅನೈತಿಕ ಸಂಬಂಧದ ಆರೋಪ

(ನ್ಯೂಸ್ ಕಡಬ)newskadaba.com ಸುಳ್ಯ, ಫೆ.02. ವಿವಾಹಿತ ಮಹಿಳೆಯನ್ನು ಕಾರಿನಲ್ಲಿ ಕರೆದೊಯ್ಯುತ್ತಿದ್ದ ಬಂಟ್ವಾಳ ತಾಲೂಕಿನ ಮುಖಂಡನೋರ್ವ ರೆಡ್ ಹ್ಯಾಂಡಾಗಿ ಜೊತೆಗಿದ್ದ ಮಹಿಳೆಯ ಪತಿಯ ಕೈಗೆ ಸಿಕ್ಕಿಬಿದ್ದ ಘಟನೆ ಸುಳ್ಯ ತಾಲೂಕಿನ ಜಾಲ್ಸೂರಿನಲ್ಲಿ ನಡೆದಿದೆ. ಈ ವೇಳೆ ಆರೋಪಿ ಮಹಿಳೆಯನ್ನು ಕಾರಿನಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಬಂಟ್ವಾಳ ತಾಲೂಕು ಕೇಪು ಗ್ರಾಮ ಮುಳಿಯಾಲ ಮುಗೇರು ನಿವಾಸಿ, ಪುಣಚ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ, ಪುತ್ತೂರು ಗ್ರಾಮಾಂತರ ಮಂಡಲದ ಉಪಾಧ್ಯಕ್ಷರೆನ್ನಲಾದ ಹರಿಪ್ರಸಾದ್ ಯಾದವ್ ಆರೋಪಿಯಾಗಿದ್ದು, ಅವರ ವಿರುದ್ಧ ಮಹಿಳೆಯ ಪತಿ ಪುತ್ತೂರು ಸಹಾಯಕ ಪೊಲೀಸ್ ಅಧೀಕ್ಷಕರಿಗೆ ದೂರು ನೀಡಿದ್ದಾರೆ.

Also Read  ಲಾರಿ ಹಾಗೂ ಅಶೋಕ್ ಲೈಲ್ಯಾಂಡ್ ದೋಸ್ತ್ ನಡುವೆ ಢಿಕ್ಕಿ ➤ ದೋಸ್ತ್ ಚಾಲಕ ಮೃತ್ಯು

ಒಡಿಯೂರು ಜಾತ್ರೆಗೆಂದು ತೆರಳಿದ್ದವಳನ್ನು ಆರೋಪಿ ಹರಿಪ್ರಸಾದ್ ಯಾದವ್ ಅನೈತಿಕ ಸಂಬಂಧ ನಡೆಸುವ ದುರುದ್ದೇಶದಿಂದ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಈ ಬಗ್ಗೆ ಮಾಹಿತಿ ತಿಳಿದ ತಾನು ಅವರನ್ನು ಬೈಕಿನಲ್ಲಿ ಹಿಂಬಾಲಿಸಿಕೊಂಡು ಹೋಗಿ ಸುಳ್ಯ ತಾಲೂಕಿನ ಜಾಲ್ಸೂರು ಎಂಬಲ್ಲಿ ಕಾರನ್ನು ತಡೆಯಲು ಯತ್ನಿಸಿದ್ದೇನೆ. ಈ ವೇಳೆ ಹರಿಪ್ರಸಾದ್ ಕಾರು ನಿಲ್ಲಿಸಿದೆ ತನ್ನ ಮೇಲೆಯೇ ಹಾಯಿಸಿ ಕೊಲ್ಲಲು ಯತ್ನಿಸಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಸ್ಥಳೀಯರನ್ನು ಕಂಡ ಆರೋಪಿ ಹರಿಪ್ರಸಾದ್ ಸ್ಥಳದಿಂದ ಓಡಿ ಹೋಗಿದ್ದಾನೆ ಎಂದು ದೂರಿನಲ್ಲಿ ಮಹಿಳೆಯ ಪತಿ ತಿಳಿಸಿದ್ದಾರೆ.

 

error: Content is protected !!
Scroll to Top