10ನೇ ತರಗತಿಯ ಬಾಲಕನ ಜೊತೆ ಪರಾರಿಯಾಗಿ ಮದುವೆಯಾದ ಯುವತಿ  !

(ನ್ಯೂಸ್ ಕಡಬ)newskadaba.com ಪಶ್ಚಿಮ ಬಂಗಾಳ, ಫೆ.02. 15 ವರ್ಷದ ಬಾಲಕನೊಂದಿಗೆ  ಯುವತಿಯೋರ್ವಳು ವಿವಾಹವಾಗಿರುವ ಘಟನೆ ಪಶ್ಚಿಮ ಬಂಗಾಳದ ಶಾಂತಿಪುರದಲ್ಲಿ ನಡೆದಿದೆ.

ನಾಡಿಯಾದ ಕೃಷ್ಣನಗರ ನಿವಾಸಿ 15 ವರ್ಷದ ಬಾಲಕನಿಗೆ  ಯುವತಿ ಜೊತೆ ಫೇಸ್‍ಬುಕ್‍ನಲ್ಲಿ ಪರಿಚಯವಾಗಿತ್ತು. ನಂತರ ಇವರ ಸ್ನೇಹ, ಪ್ರೀತಿಗೆ ತಿರುಗಿದೆ‌.

ಮನೆಯಿಂದ ಓಡಿ ಹೋಗಿರುವ ಈ ಜೋಡಿ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದು, ಲೋಕಲ್ ರೈಲಿನಲ್ಲಿ ತೆರಳುತ್ತಿದ್ದಾಗ ಅನುಮಾನಗೊಂಡು ಪ್ರಯಾಣಿಕರು ಮಕ್ಕಳ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಬಳಿಕ ಶಾಂತಿಪುರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ‌.

Also Read  ಮಂಗಳೂರು ಗೋಲಿಬಾರ್ ನಲ್ಲಿ ಮೃತಪಟ್ಟ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಮಮತಾ ಬ್ಯಾನರ್ಜಿ

 

 

error: Content is protected !!
Scroll to Top