ಪುತ್ತೂರು: ಸ್ಕೂಟರ್ ಮತ್ತು ಮಾರುತಿ ಕಾರಿನ ನಡುವೆ ಅಪಘಾತ   ➤ ಸವಾರ ಗಂಭೀರ

(ನ್ಯೂಸ್ ಕಡಬ)newskadaba.com ಪುತ್ತೂರು, ಫೆ.02.  ಸ್ಕೂಟರ್ ಮತ್ತು ಮಾರುತಿ ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಪೋಳ್ಯದಲ್ಲಿ ನಡೆದಿದೆ. ಅಪಘಾತದಿಂದಾಗಿ ಸ್ಕೂಟರ್ ಸವಾರ ಗಾಯಗೊಂಡಿದ್ದಾರೆ.

ಪುತ್ತೂರು ದ್ವಾರಕ ಕನ್ ಸ್ಟ್ರಕ್ಷನ್ ನ ಶರಣ್ ಎಂಬವರು ಸೈಟ್ ಇನ್ಸ್ಪೆಕ್ಷನ್ ಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಪೋಳ್ಯ ಸಮೀಪ ವಿರುದ್ಧ ದಿಕ್ಕಿನಿಂದ ಬಂದ ಮಾರುತಿ ವ್ಯಾನ್ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಿಂದ ತೀವ್ರ ಗಾಯಗೊಂಡ ಶರಣ್ ಅವರನ್ನು ಅದೇ ದಾರಿಯಲ್ಲಿ ಬರುತ್ತಿದ್ದ ಡಾ.ದೇವಿಪ್ರಸಾದ್ ಅವರು ತನ್ನ ವಾಹನದಲ್ಲಿ ಪುತ್ತೂರು ಪ್ರಗತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

Also Read  ಉನ್ನತ ಶಿಕ್ಷಣದ ಸವಾಲುಗಳು ಮತ್ತು ಶಿಕ್ಷಕರ ತೊಡಗುವಿಕೆ - ವಿಚಾರ ಸಂಕಿರಣ

 

error: Content is protected !!
Scroll to Top