ನೆಟ್ಟಣ, ಬಿಳಿನೆಲೆ ಪರಿಸರದಲ್ಲಿ ಕಾಡಾನೆ ಪ್ರತ್ಯಕ್ಷ ► ಕಿದು CPCRIನಲ್ಲಿ ಆನೆ ದಾಳಿ

(ನ್ಯೂಸ್ ಕಡಬ) newskadaba.com ಕಡಬ, ಡಿ.21. ಇಲ್ಲಿಗೆ ಸಮೀಪದ ನೆಟ್ಟಣದಲ್ಲಿರುವ ಕಿದು ಸಿ.ಪಿ.ಸಿ.ಆರ್.ಐ ತೆಂಗು ಹಾಗೂ ಅಡಕೆ ಸಂಶೋಧನಾ ಕೇಂದ್ರಕ್ಕೆ ಆನೆಗಳ ಹಿಂಡು ಲಗ್ಗೆ ಇಟ್ಟು ಅಲ್ಲಿನ ಕೃಷಿ ನಾಶ ಮಾಡಿದ ಘಟನೆ ಮಂಗಳವಾರ ತಡ ರಾತ್ರಿ ನಡೆದಿದೆ.

ಕೇಂದ್ರದ ತಡೆ ಬೇಲಿ ಮುರಿದು ಒಳನುಗ್ಗಿರುವ ಆನೆಗಳು ಆರು ತೆಂಗಿನ ಮರ, ಹತ್ತಾರು ಬಾಳೆ ಗಿಡ ಹಾಗೂ ಅಡಕೆ ಸಸಿಗಳನ್ನು ನಾಶ ಮಾಡಿವೆ. ಈ ಬಗ್ಗೆ ಅಲ್ಲಿನ ಅಧಿಕಾರಿಗಳು ಅರಣ್ಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ನೆಟ್ಟಣ, ಬಿಳಿನೆಲೆ ಪರಿಸರದಲ್ಲಿ ಪದೇ ಪದೇ ಕಾಡಾನೆಗಳು ಪ್ರತ್ಯಕ್ಷವಾಗುತ್ತಿದ್ದು ಗ್ರಾಮಸ್ಥರನ್ನು ಭಯಭೀತರನ್ನಾಗಿಸಿದೆ.

Also Read  ಬಂಟ್ವಾಳ : ಕೋವಿಡ್ ಪರಿಹಾರ ನೆಪ ಹೇಳಿ ವೃದ್ಧೆಯ ಕಿವಿಯೋಲೆ ದೋಚಿದ ಅಪರಿಚಿತ

error: Content is protected !!
Scroll to Top