ಮಂಗಳೂರು: ಅಕ್ರಮ ಗಾಂಜಾ ಸಾಗಾಟ.! ➤ ಮೂವರ ಬಂಧನ

crime, arrest, suspected

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.01. ನೆತ್ತಿಲಪದವು ಎಂಬಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಸುಮಾರು 27 ಲಕ್ಷ ರೂ. ಮೌಲ್ಯದ ಗಾಂಜಾ ಸೇರಿದಂತೆ ಒಟ್ಟು 32,07,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಜೇಶ್ವರದ ಹೊಸಬೆಟ್ಟು ಕಡಪುರಂ ನಿವಾಸಿ ಅಬೂಬಕ್ಕರ್ ಸಿದ್ದೀಕ್ ಅಲಿಯಾಸ್ ಹ್ಯಾರೀಸ್ (35), ಕುಂಬ್ಳೆ ಮಂಬ್ರಾನ್ ಗ್ರಾಮದ ಆರಿಕ್ಕಾಡಿ ಬೀರಂಟಿಕಾರ ನಿವಾಸಿ ಅಖಿಲ್ ಎಂ. (25), ಹಾಗೂ ಹೈದರ್ ಆಲಿ ಅಲಿಯಾಸ್ ಗಾಡಿ ಹೈದರ್ (39) ಬಂಧಿತ ಆರೋಪಿಗಳು. ಬಂಧಿತರಿಂದ ಸುಮಾರು 27 ಲಕ್ಷ ರೂ. ಮೌಲ್ಯದ ಗಾಂಜಾ, ಗಾಂಜಾ ಸಾಗಾಟಕ್ಕೆ ಬಳಸಿದ ಫೋರ್ಡ್ ಕಂಪೆನಿಯ ನೇರಳೆ ಬಣ್ಣದ ಕಾರು ಸೇರಿದಂತೆ ಒಟ್ಟು 32,07,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Also Read  ಪ್ರವೀಣ್ ಹತ್ಯೆ ಪ್ರಕರಣ - ಆರೋಪಿಗಳ ಪತ್ತೆಗೆ ಐದು ತಂಡ ರಚನೆ ➤ ಶಂಕಿತ ಹಲವರ ತೀವ್ರ ವಿಚಾರಣೆ

error: Content is protected !!
Scroll to Top