ಪ್ಯಾನ್‌ಕಾರ್ಡ್ ಇನ್ಮುಂದೆ ಕಾಮೆನ್ ಐಡೆಂಟಿಟಿ ➤ ನಿರ್ಮಲಾ ಸೀತರಾಮನ್

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.01. ರೈತರು, ಇತರರ ಅನುಕೂಲಕ್ಕೆ ಕೆವೈಸಿ ಪ್ರಕ್ರಿಯೆಯ ಸರಳೀಕರಣಗೊಳಿಸಲಾಗುವುದು ಹಾಗೂ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗೆ ಪ್ಯಾನ್‌ಕಾರ್ಡ್‌ ಇನ್ನು ಸಾಮಾನ್ಯ ಗುರುತಿನ ಚೀಟಿ ಎಂದು ಬಜೆಟ್ ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಘೋಷಿಸಿದ್ದಾರೆ.

ರೈತರು ಕೆಲವು ಸೌಲಭ್ಯ ಪಡೆಯಲು ಬ್ಯಾಂಕ್ ಗಳಲ್ಲಿ ಕಡ್ಡಾಯವಾಗಿರುವ ಕೆ ವೈಸಿ ಪ್ರತಿಕ್ರಿಯೆಯನ್ನು ಸರಳಗೊಳಿಸುವುದಾಗಿ ಅವರು ಹೇಳಿದ್ದಾರೆ. ಡಿಜಿಟಲೀಕರಣ ವಿಭಾಗದಲ್ಲಿ ಇನ್ಮುಂದೆ ಕೆವೈಸಿ ವಿಚಾರದಲ್ಲಿ ಯಾವುದೇ ಕಠಿಣ ಪ್ರಕ್ರಿಯೆ ಇರುವುದಿಲ್ಲ ಎಂದು ಬಜೆಟ್ ನಲ್ಲಿ ಘೋಷಿಸಿದ್ದಾರೆ. ಕೇಂದ್ರ ಸರ್ಕಾರದ ದ ಎಲ್ಲಾ ಯೋಜನೆಗಳಿಗೆ ಪ್ಯಾನ್ ಕಾರ್ಡ್ ಅನ್ನು ಕಾಮೆನ್ ಐಡೆಂಟಿಟಿಯಾಗಿ ಪರಿಗಣಿಸಲಾಗುತ್ತದೆ ಎಂದು ಘೋಷಿಸಲಾಗಿದೆ.

Also Read  ಮೈಮೇಲೆ ಕಬ್ಬಿಣದ ಗೇಟ್ ಬಿದ್ದು ಬಾಲಕಿ ಮೃತ್ಯು !

error: Content is protected !!
Scroll to Top