ಉಡುಪಿ: ಅಧಿಕಾರಿಯೆಂದು ನಂಬಿಸಿ ಆನ್‌ಲೈನ್‌ ಮೂಲಕ ಸಾವಿರಾರು ರೂ. ವಂಚನೆ

(ನ್ಯೂಸ್ ಕಡಬ)newskadaba.com ಉಡುಪಿ, ಫೆ.01. ಅಧಿಕಾರಿ ಎಂದು ನಂಬಿಸಿ ವ್ಯಕ್ತಿಯೋರ್ವರಿಗೆ 99,997 ರೂ. ಹಣ ವಂಚಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಫ್ರಾನ್ಸಿಸ್‌ ಪಿಯುಸ್‌ ಪುಟಾಡೋ ಎಂಬವರು ಅವರು ತಮ್ಮ ಪೆಟಿಎಂ ಫಾಸ್ಟ್‌ ಟ್ಯಾಗ್‌ ನಿಷ್ಕ್ರಿಯಗೊಂಡ ಬಗ್ಗೆ ಗೂಗಲ್‌ನಲ್ಲಿ ಪೆಟಿಎಂ ಫಾಸ್ಟ್‌ ಟ್ಯಾಗ್‌ ಎಪ್ಲಿಕೇಶನ್‌ ಹುಡುಕಿದಾಗ ಗೂಗಲ್‌ನಲ್ಲಿ ಪೆಟಿಎಂ ಹೆಲ್ಪ್ ಸಪೋರ್ಟ್‌ ನಲ್ಲಿ ಕಂಡುಬಂದ ಮೊಬೈಲ್‌ ನಂಬ್ರ +918249255475 ಕ್ಕೆ ಕರೆ ಮಾಡಿದಾಗ ಆ ವ್ಯಕ್ತಿ ತಾನು ಪೆಟಿಎಂ ಫಾಸ್ಟ್‌ ಟ್ಯಾಗ್‌ ವೆಬ್‌ಸೈಟ್‌ ಅಧಿಕಾರಿಯಾಗಿ ಎಂಬುದಾಗಿ ನಂಬಿಸಿ, ಪೆಟಿಎಂ ಫಾಸ್ಟ್‌ ಟ್ಯಾಗ್‌ ಸರಿಪಡಿಸಿ ಕೊಡುವುದಾಗಿ ಅವರಿಂದ ಮೊಬೈಲ್‌ಗೆ ಬಂದ ಒಟಿಪಿ ಪಡೆದು ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾದ ಎಸ್‌.ಬಿ. ಖಾತೆಯಿಂದ 49,000ರೂ., 19,999ರೂ., 19,998 ರೂ., 9,999ರೂ., 1,000ರೂ.ನಂತೆ ಒಟ್ಟು 99,997ರೂ. ಹಣವನ್ನು ಆನ್‌ಲೈನ್‌ ಮೂಲಕ ವರ್ಗಾವಣೆ ಮಾಡಿಕೊಂಡಿರುವುದಾಗಿ ದೂರು ದಾಖಲಾಗಿದೆ.

 

error: Content is protected !!

Join the Group

Join WhatsApp Group