(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.01. ನಾವು ಹಣಗಳನ್ನು ಉಳಿತಾಯ ಮಾಡಬೇಕು ಅಂತ ಬ್ಯಾಂಕ್ಗಳಲ್ಲಿ ಹಣವನ್ನು ಇಡುತ್ತೇವೆ. ಅದ್ರಲ್ಲೂ ಹತ್ತು ಜನರ ಅಭಿಪ್ರಾಯವನ್ನು ಕೇಳಿ, ಎಲ್ಲಿ ಹೆಚ್ಚಾಗಿ ಲೋನ್ ಕೊಡುತ್ತಾರೆ, ಇಎಮ್ಐ ಕೊಡ್ತಾರೆ ಮತ್ತು ಇಂಟ್ರೆಸ್ಟ್ ಹೆಚ್ಚಾಗಿ ಕೊಡ್ತಾರೆ ಅಂತ ನೋಡಿಕೊಂಡು ಬ್ಯಾಂಕ್ ಖಾತೆಗಳನ್ನು ತೆಗೆಯುತ್ತಾರೆ.
ಇದರಿಂದ ಅದೆಷ್ಟೋ ಜನರಿಗೆ ಸಹಾಯವಾಗುತ್ತದೆ. ಈಗಿನ ಕಾಲದಲ್ಲಿ ಎಲ್ಲವೂ ಡಿಜಿಟಲ್ ಆಗಿದ್ರಿಂದ ಎಟಿಎಮ್ಗೆ ಹೋಗಿ ಹಣವನ್ನು ಡ್ರಾ ಮಾಡೋದು ಬಹಳ ವಿರಳ. ಮಾಡಿದ್ರೂ ಕೂಡ ಎಲ್ಲಾದ್ರೂ ಟ್ರಿಪ್ಗಳಿಗೆ ಹೋಗುವಾಗ ಎಮರ್ಜನ್ಸಿಗೆ ಬೇಕಾಗುತ್ತದೆ ಎಂಬುವ ಕಾರಣಕ್ಕಾಗಿ ಎಟಿಎಂನ ಮೊರೆ ಹೋಗುತ್ತಾರೆ. ಇನ್ನೂ ಕೆಲವೊಂದಷ್ಟು ಹಾಸ್ಯ ಅಂದ್ರೆ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಶೆಕೆ ಆಗ್ತಾ ಇದ್ರೆ ಎಟಿಎಮ್ಗೆ ಹೋಗಿ ಜನರು ಎಸಿಯಿಂದ ಶೆಕೆಯನ್ನು ಕಡಿಮೆ ಮಾಡಿಕೊಳ್ಳುವುದು ಕೂಡ ಇದೆ. ತುಂಬ ಹಣವು ಸಡನ್ ಆಗಿ ಖಾಲಿ ಆದಾಗ ಜನರು ಬ್ಯಾಂಕ್ ಅವರ ಮೇಲೆ ಹೌಹಾರಿದ್ದರು. ಆದರೆ ನಿಜವಾಗಿಯೂ ಏನಾಗಿದೆ ಎಂದು ಪತ್ತೆ ಹಚ್ಚಿದಾಗ ಒಂದು ಸತ್ಯ ಬಯಲಿಗೆ ಬಂದಿದೆ.