ಕೊಲೆ ಕೃತ್ಯಗಳನ್ನು ಬೆಂಬಲಿಸುವ ದೇಶದ್ರೋಹಿಗಳನ್ನು ಗಡಿಪಾರು‌ ಮಾಡಬೇಕು ➤ ಶಾಸಕ ಯು.ಟಿ. ಖಾದರ್

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.01. ರಾಜಕೀಯಕ್ಕೆ ಬೇಕಾಗಿ ಕೊಲೆಗಳಿಗೆ ಪ್ರೇರಣೆ ನೀಡುವ ದೇಶದ್ರೋಹಿಗಳನ್ನು ಗಡಿಪಾರು ಮಾಡಬೇಕು ಎಂದು ಶಾಸಕ ಯು.ಟಿ.ಖಾದರ್‌ ಆಗ್ರಹಿಸಿದರು.

ತುಮಕೂರಿನಲ್ಲಿ ಶರಣ್ ಪಂಪ್ವೆಲ್ ನೀಡಿರುವ ಹೇಳಿಕೆ‌ ಬಗ್ಗೆ ಪ್ರತಿಕ್ರಿಯಿಸಿದ ಯುಟಿ ಖಾದರ್ ಕೊಲೆಗೀಡಾದವರ ಮನೆಯವರ ನೋವು ಅವರಿಗೆ ಅರ್ಥವಾಗುವುದಿಲ್ಲ. ಸಂಘ ಪರಿವಾರದವರು ಕೊಲೆಗಾಗಿ ಕಾಯುತ್ತಿರುವಂತಿದೆ ಎಂದು ಹೇಳಿದ್ದಾರೆ‌.

ಸಮಾಜಕ್ಕೆ ಅಪಾಯಕಾರಿ ಹೇಳಿಕೆ ನೀಡಿರುವ ಶರಣ್‌ ಪಂಪ್‌ವೆಲ್‌ ವಿರುದ್ಧ ಪೊಲೀಸ್‌ ಇಲಾಖೆ ಕ್ರಮ ಕೈಗೊಳ್ಳಬೇಕು ಹಾಗೂ ಫಾಝಿಲ್‌ ಕೊಲೆ ಕುರಿತು ಮರು ತನಿಖೆಯಾಗಬೇಕು ಎಂದು ಖಾದರ್ ಆಗ್ರಹಿಸಿದ್ದಾರೆ‌.

 

 

Scroll to Top