ಮಂಗಳೂರು: ತಂತ್ರಜ್ಞಾನ ದುರ್ಬಳಕೆ ➤ ATM ನಿಂದ 1.09 ಲ.ರೂ ವಂಚನೆ

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.01. ತಂತ್ರಜ್ಞಾನ ದುರ್ಬಳಕೆ ಮಾಡಿ ನಗರದ ಶಕ್ತಿನಗರದ ರಾಷ್ಟ್ರೀಕೃತ ಬ್ಯಾಂಕೊಂದರ ಎಟಿಎಂನಿಂದ ಹಣ ತೆಗೆದು ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

2022ರ ಅಕ್ಟೋಬರ್ ತಿಂಗಳಲ್ಲಿ ತಂತ್ರಜ್ಞಾನ ದುರ್ಬಳಕೆ ಮಾಡಿ ಎಟಿಎಂ ಅನ್ನು ಟ್ಯಾಂಪರಿಂಗ್ ಮಾಡಿ ನೆಟ್ ವರ್ಕ್ ಪವರ್ ಕೇಬಲ್ ತುಂಡರಿಸಿ ಸೂಪರ್ ವೈಸರ್ ಮೋಡ್ ಗೆ ತರುವ ಮೂಲಕ 1.09 ಲ.ರೂ ತೆಗೆದು ವಂಚಿಸಿದ್ದಾರೆ ಎಂದು ಬ್ಯಾಂಕ್ ಮ್ಯಾನೇಜರ್ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ.

Also Read  ಪಡುಬಿದ್ರೆ: ಖಾಸಗಿ ಬಸ್ಸುಗಳ ನಡುವಿನ ಪೈಪೋಟಿ ► ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಬಸ್ - ಹಲವರಿಗೆ ಗಾಯ

 

error: Content is protected !!
Scroll to Top