ಪ್ರೀತಿಸಿ ಮೋಸ ಮಾಡಿದ ಯುವತಿ ➤ ಮನನೊಂದು ಹಾಸನದ ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಹಾಸನ, ಜ.31. ಹುಡುಗಿ ಪ್ರೀತಿಸಿ ಕೈ ಕೊಟ್ಟಳೆಂದು ಮನನೊಂದ ಯುವಕ ಚೆನ್ನೈನ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ನಗರದ ಸಂಗಮೇಶ್ವರ ಬಡಾವಣೆಯ ಕಾರ್ತಿಕ್ (26)ಮೃತಪಟ್ಟ ಯುವಕ. ಕಾರ್ತಿಕ್ ಕಳೆದ 4 ವರ್ಷದಿಂದ ಹೊಳೆನರಸೀಪುರ ತಾಲೂಕಿನ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.

ಯುವತಿ ಕರೆಮಾಡಿ ತಾನು ಚೆನ್ನೈನಲ್ಲಿದ್ದು, ಅಲ್ಲಿಗೆ ಬರುವಂತೆ ಹೇಳಿದ್ದಾಳೆ. ಆಕೆಯ ಮಾತು ನಂಬಿ ಅಲ್ಲಿಗೆ ಕಾರ್ತಿಕ್ ಹೋಗಿದ್ದಾನೆ. ಬಳಿಕ ಯುವತಿ ತಾನು ಹಾಸನದಲ್ಲಿಯೇ ಇದ್ದೇನೆ ಎಂದು ಯುವತಿ ಹೇಳಿದ್ದಾಳೆ. ಇದರಿಂದ ಮನನೊಂದ ಕಾರ್ತಿಕ್ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾರ್ತಿಕ್ ಪ್ರತಿಷ್ಟಿತ ಹೋಟೆಲ್ ವೊಂದರಲ್ಲಿ ರಿಸಪ್ಶನಿಟ್ಸ್ ಆಗಿ ಕೆಲಸ ಮಾಡುತ್ತಿದ್ದನು. ಇನ್ನೂ ಮಗನ ಸಾವಿಗೆ ಯುವತಿಯೇ ಕಾರಣ ಎಂದು ಕಾರ್ತಿಕ್ ಪೋಷಕರು ಆರೋಪಿಸಿದ್ದಾರೆ.

Also Read  ಆದೇಶ ಪಾಲಿಸದ ಇನ್ಸ್‌ಪೆಕ್ಟರ್ ವಿರುದ್ಧ ತನಿಖೆಗೆ ಹೈಕೋರ್ಟ್ ಆದೇಶ

error: Content is protected !!
Scroll to Top